December 23, 2024

ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ವಿಟ್ಲ ಶಾಖೆಯ ಸ್ವಂತ ಕಟ್ಟಡದ ಉದ್ಘಾಟನೆ, ಸ್ಥಳಾಂತರ: ಪರಿಶ್ರಮ, ಸಾಧನೆ ಇದ್ದಾಗ ಗೌರವ ಅರಸಿಕೊಂಡು ಬರುತ್ತದೆ: ಒಡಿಯೂರು ಶ್ರೀ

0

ವಿಟ್ಲ: ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ವಿಟ್ಲ ಶಾಖೆಯ ಸ್ವಂತ ಕಟ್ಟಡದ ಉದ್ಘಾಟನೆ, ಸ್ಥಳಾಂತರ ಕಾರ್ಯಕ್ರಮ ಸ್ಮಾರ್ಟ್ ಸಿಟಿ ಕಟ್ಟಡದ 3 ನೇ ಮಹಡಿಯಲ್ಲಿ ಸೋಮವಾರ ನಡೆಯಿತು.


ಕಟ್ಟಡ ಉದ್ಘಾಟಿಸಿ, ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸಂಘದ ಸಂಸ್ಥಾಪಕರಾದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಸಹಕಾರಿ ತತ್ವದಲ್ಲಿ ಬದುಕಿನ ಸಾರ ಅಡಗಿದೆ. ಗ್ರಾಹಕರು ಸಹಕಾರಿ ಸಂಘದ ಜೀವಾಳ. ಇದರ ಜತೆಗೆ ಸಿಬ್ಬಂದಿಯ ನಗುಮೊಗದ ಸೇವೆಯೂ ಅಗತ್ಯವಾಗಿದೆ.
ಪರಿಶ್ರಮ, ಸಾಧನೆ ಇದ್ದಾಗ ಗೌರವ ಅರಸಿಕೊಂಡು ಬರುತ್ತದ. ಶ್ರದ್ಧೆ ಯಶಸ್ಸಿನ ಗುಟ್ಟಾದರೆ
ಪ್ರಾಮಾಣಿಕ ಸೇವೆ ಉನ್ನತಿಯ ಮಾರ್ಗ. ಕೊಡುಕೊಳ್ಳುವಿಕೆಯಲ್ಲಿ ಪ್ರಾಮಾಣಿಕತೆಯೊಂದಿಗೆ ನಿಸ್ವಾರ್ಥ ಸೇವೆಯಿದ್ದಾಗ ಯಶಸ್ಸಿಯ ಹಾದಿ ಸುಗಮವಾಗುತ್ತದೆ ಎಂದು ತಿಳಿಸಿದರು .

ಗೌರವ ಮಾರ್ಗದರ್ಶಕರಾದ ಸಾಧ್ವೀ ಮಾತಾನಂದಮಯೀ ಆಶೀರ್ವಚನ ನೀಡಿ ಗುರುವರ್ಯರ ಅನುಗ್ರಹ, ಮಾರ್ಗದರ್ಶನದಲ್ಲಿ ಸಂಘ ಅಗಾಧವಾದ ಬೆಳೆಯುತ್ತಿದೆ. ಸಹಕಾರ ಎಂದರೆ ಮಾನವೀಯ ಮೌಲ್ಯವನ್ನು ತುಂಬಿಕೊಂಡಿದ್ದು, ಸೇವೆಗೆ ವಿಶೇಷ ಮಹತ್ವವಿದೆ.
ಸಹಕಾರಿ ಸಂಸ್ಥೆಗಳಿಂದ ಹಳ್ಳಿಗಳ ಉದ್ಧಾರ ಸಾಧ್ಯ ಎಂದು ತಿಳಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ ಒಡಿಯೂರು ವಿವಿಧೋದ್ದೇಶ ಜಿಲ್ಲೆಯ ಸಹಕಾರಿ ಕ್ಷೇತ್ರ ಮುಂಚೂಣಿಯಲ್ಲಿದೆ. ಭಾರತ ಸರಕಾರ ಸಹಕಾರಿ ಕ್ಷೇತ್ರವನ್ನು ಬೆಳೆಸುವ ನಿಟ್ಟಿನಲ್ಲಿ ವಿಶೇಷ ಆದ್ಯತೆಯನ್ನು ನೀಡುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳು ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ. ಜಿಡಿಪಿ ಶ್ರೇಯಾಂಕ ಮಟ್ಟದಲ್ಲಿ ಭಾರತ 5ನೇ ಸ್ಥಾನವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಮೂರನೇ ಸ್ಥಾನಕ್ಕೆ ಹೋಗಲಿದ್ದೇವೆ ಎಂದು ತಿಳಿಸಿದರು.

 

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ವಹಿಸಿದ್ದರು.

ಸಮಾರಂಭದಲ್ಲಿ ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ ಭಟ್, ವೈದ್ಯ ಡಾ. ವಿ. ಕೆ. ಹೆಗ್ಡೆ, ವಕೀಲ ಜಯರಾಮ ರೈ, ಉದ್ಯಮಿಗಳಾದ ಅಲೆಕ್ಸಾಂಡರ್ ಲಸ್ರಾದೊ, ರಾಧಾಕೃಷ್ಣ ನಾಯಕ್ ವಿಟ್ಲ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಫೆಡರೇಶನ್ ಜಿಲ್ಲಾ ಸಂಯೋಜಕ ವಿಜಯ ಕುಮಾರ್ ಬಿ. ಮತ್ತಿತರರು ಭಾಗವಹಿಸಿದ್ದರು.

ವಿಟ್ಲ ಶಾಖೆಯ ಸಿಬ್ಬಂದಿ ಶ್ರದ್ಧಾ ಪ್ರಾರ್ಥಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ಸ್ವಾಗತಿಸಿದರು. ನಿರ್ದೇಶಕ ಎಂ. ಉಗ್ಗಪ್ಪ ಶೆಟ್ಟಿ ಪ್ರಸ್ತಾವನೆಗೈದರು. ನಿರ್ದೇಶಕ ಸೇರಾಜೆ ಗಣಪತಿ ಭಟ್ ವಂದಿಸಿದರು. ಲೋಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!