December 23, 2024

ದತ್ತ ಮಾಲೆಯನ್ನು ಹಾಕುತ್ತೇನೆ ಎಂದ ಕುಮಾರಸ್ವಾಮಿ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಸ್ವಾಗತ

0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ( ಅವರ ರಾಜಕೀಯ ಸಮೀಕರಣ ಬದಲಾದಂತೆ ಅವರ ಧಾರ್ಮಿಕ ನಿಲುವುಗಳಲ್ಲೂ ಸಹ ಬದಲಾಗುತ್ತಿವೆ.

ಮೊದಲೆಲ್ಲಾ ಬಲಪಂಥಿಯ ನಿಲುವುಗಳನ್ನು ವಿರೋಧ ಮಾಡುತ್ತಾ ಬಂದಿರುವ ಕುಮಾರಸ್ವಾಮಿ ಇದೀಗ ಬಲಪಂಥಿದ ಕಡೆ ವಾಲಿದ್ದಾರೆ. ಇದಕ್ಕೆ ಪೂರಕವೆಂಬಂತೆ ದತ್ತ ಮಾಲೆ ಏಕೆ ಹಾಕಬಾರದು. ಸಮಯ ಬಂದರೆ ದತ್ತ ಮಾಲೆಯನ್ನೂ ಹಾಕುತ್ತೇವೆ ಎಂದು ಹೇಳಿದ್ದಾರೆ. ಇದನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸ್ವಾಗತ ಮಾಡಿವೆ.

ಟ್ವೀಟ್(ಎಕ್ಸ್) ಮೂಲಕ ವಿಹೆಚ್ಪಿ ಕಾರ್ಯಕರಣಿ ಸದಸ್ಯ ರಘು ಅವರು ಕುಮಾರಸ್ವಾಮಿಯವರು ದತ್ತಮಾಲಾಧಾರಣೆ ಮಾಡಲು ನಿರ್ಧರಿಸುವುದು ಸ್ವಾಗತಾರ್ಹ, ನಿಮ್ಮ ರಾಜಕೀಯ ಭವಿಷ್ಯ ಬದಲಾಗಲಿದ್ದು, ಇನ್ನಷ್ಟು ಶಕ್ತಿ ನೀಡಲಿ ಎಂದು ದತ್ತಾತ್ರೇಯ ಸ್ವಾಮಿಯಲ್ಲಿ ಬೇಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

 

 

ಇನ್ನು ಡಿಸೆಂಬರ್ 17 ರಿಂದ 26ರವರೆಗೆ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಡೆಯಲಿರುವ ದತ್ತಮಾಲಾ ಅಭಿಯಾನ ನಡೆಯಲಿದ್ದು, ಇದರಲ್ಲಿ ಪಾಲ್ಗೊಳುವಂತೆ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಸಂಘಟನೆಗಳು ಹೆಚ್ಡಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

error: Content is protected !!