December 23, 2024

ಬೆಂಗಳೂರು:BJP ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ವಂಚನೆ: ಸಿಸಿಬಿಗೆ ತಪ್ಪೊಪ್ಪಿಗೆ ನೀಡಿದ ಚೈತ್ರಾ ಕುಂದಾಪುರ

0

ಬೆಂಗಳೂರು: ಕರಾವಳಿ ಮೂಲದ ಉದ್ಯಮಿಗೆ bjp ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಮಾಡಿದ್ದು ನಿಜ ಎಂದು ಸಂಘಪರಿವಾರದ ಕಾರ್ಯಕರ್ತೆ ಚೈತ್ರಾ ಒಪ್ಟಿಕೊಂಡಿದ್ದು ಈ ಸಂಬಂಧ ಸಿಸಿಬಿಗೆ ತಪ್ಪೊಪ್ಪಿಗೆ ನೀಡಿದ್ದಾರೆ.

” 2018ರಲ್ಲಿ ಅಭಿನವ ಹಾಲಶ್ರೀಯನ್ನು ಭೇಟಿ ಮಾಡಿದ್ದೆ. ನನಗೂ ಬಿಜೆಪಿಯ ಕೆಲ ನಾಯಕರು ಗೊತ್ತಿದ್ರಿಂದ ಅಭಿನವ ಹಾಲಶ್ರೀ ನನಗೆ ಒಂದು ಮಾತು ಹೇಳಿದ್ರು. ಈಗಾಗಲೇ 10 ಜನರ ಪೈಕಿ 6 ಜನರಿಗೆ ಟಿಕೆಟ್ ಕೊಡಿಸಿದ್ರು. ಇನ್ನು 4 ಜನರಿಗೆ ಟಿಕೆಟ್ ಕೊಡಿಸ್ತೀನಿ ಅಂತ ಹೇಳಲಾಗಿತ್ತು.

ಬಿಜೆಪಿಯ ಟಿಕೆಟ್ ಯಾರಿಗಾದ್ರೂ ಬೇಕು ಅಂದ್ರೆ ನನಗೆ ಹೇಳಿ ಟಿಕೆಟ್ ಕೊಡಿಸ್ತೀನಿ ಅಂದಿದ್ರು. 2022ರಲ್ಲಿ ಪ್ರಸಾದ್ ಬೈಂದೂರು ಮೂಲಕ ನನಗೆ ಉದ್ಯಮಿ ಗೋವಿಂದ ಬಾಬು ಪೂಜಾರಿ ಸಂಪರ್ಕ ಆಯ್ತು. ಗೋವಿಂದಬಾಬು ಪೂಜಾರಿ ಬೈಂದೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ರು. ಗೋವಿಂದ ಬಾಬು ಪೂಜಾರಿ ಅವರಿಗೆ ಮೋಸ ಮಾಡೋದಕ್ಕಾಗಿ ಗಗನ್ ಜೊತೆ ಸೇರಿಕೊಂಡೆ. ಕೇಂದ್ರದ ನಾಯಕರು ಅಂತ ಪರಿಚಯ ಮಾಡೋದಕ್ಕೆ ರಮೇಶ್, ಧನರಾಜ್ ತೀರ್ಮಾನ ಮಾಡಿದ್ವಿ. ಧನರಾಜ್ ಮತ್ತು ರಮೇಶ್‍ಗೆ ಮೂರು ಗಂಟೆಗಳ ಕಾಲ ರಿಹರ್ಸಲ್ ಮಾಡಿಸಿದ್ವಿ. 2022ರ ಜುಲೈ 4ರಂದು ಗಗನ್ , ಗೋವಿಂದ ಬಾಬು ಪೂಜಾರಿಯನ್ನು ಚಿಕ್ಕಮಗಳೂರಿನ ಅತಿಥಿ ಗೃಹಕ್ಕೆ ಕರೆಸಿಕೊಂಡು ಧನರಾಜ್ ಮತ್ತು ರಮೇಶ್ ಇಬ್ಬರನ್ನು ಪಿಎಂ ಮತ್ತು ಗೃಹಸಚಿವಾಲಯದ ನಿಕಟವರ್ತಿಗಳು ಅಂತ ಪರಿಚಯ ಮಾಡಿಕೊಟ್ವಿ. ಗಗನ್ ಆ ಸಂದರ್ಭದಲ್ಲಿ 50 ಲಕ್ಷಕ್ಕೆ ಬೇಡಿಕೆ ಇಟ್ಟರು. ಗೋವಿಂದಬಾಬು ಪೂಜಾರಿ ಏಕಾಏಕಿ ಹಣ ನೀಡಲು ಒಪ್ಪಿಕೊಂಡ್ರು. ಇದ್ರಿಂದ ಖುಷಿಯಾಗಿ ನಾವು ಮುಂದಿನ ಡೀಲ್‍ಗೆ ಇಳಿದ್ವಿ. ಹೈಕಮಾಂಡ್ ನಾಯಕರು ಅಂತ ಹೇಳಿದ್ದ ಧನರಾಜ್ ಮತ್ತು ರಮೇಶ್‍ಗೆ 2 ಲಕ್ಷ ಹಣ ಕೊಟ್ವಿ. ಶಿವಮೊಗ್ಗದ ಆರ್‍ಎಸ್‍ಎಸ್ ಕಚೇರಿಯ ಬಳಿ ಮತ್ತೆ ಕರೆಸಿ 3 ಕೋಟಿ ಕೇಳಿದ್ವಿ. 3 ಕೋಟಿಯನ್ನು ಪ್ರಸಾದ್ ಬೈಂದೂರು ಮೂಲಕ ಮಂಗಳೂರಿಗೆ ಹಣ ತರಿಸಿಕೊಳ್ಳಲಾಯ್ತು. ಗೋವಿಂದ ಬಾಬು ನೀಡಿದ್ದ 50 ಲಕ್ಷದಲ್ಲಿ 12 ಲಕ್ಷ ಗಗನ್ ಕಡೂರಿಗೆ ನೀಡಲಾಗಿತ್ತು. ಚೆನ್ನನಾಯ್ಕ್ ನ ನ್ನು ಬಳಸಿಕೊಂಡು ವಿಶ್ವನಾಥ್ ಜೀ ಹೆಸರನ್ನು ಹೇಳಿ ಮೋಸ ಮಾಡಲಾಗಿತ್ತು ಎಂದು ಸಿಸಿಬಿ ಮುಂದೆ ಚೈತ್ರಾ ತಪ್ಪೊಪ್ಪಿಕೊಂಡಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!