ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಬಗ್ಗೆ ನಿಂದನಾತ್ಮಕ ಬರಹ: ದೂರು ದಾಖಲು
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಬಗ್ಗೆ ನಿಂದನಾತ್ಮಕ ಬರಹ ಹಾಗೂ ಗರ್ಭಗುಡಿಯ ಪೋಟೋ ತೆಗೆದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ವರ್ಗದವರು ಹಾಗೂ ಒಳಾಂಗಣ ನೌಕರರು ದೂರು ನೀಡಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯ ಫೋಟೋ ತೆಗೆಯುಲು ನಿಷೇಧವಿದ್ದರೂ ಕುಲ್ಕುಂದದ ವ್ಯಕ್ತಿಯೊಬ್ಬರು ಗರ್ಭ ಗುಡಿಯ ಪೋಟೋ ತೆಗೆದಿದ್ದಾರೆ.
ಅಲ್ಲದೆ ಈ ಫೋಟೋವನ್ನು ಕುಕ್ಕೆ ಶ್ರೀ ದೇವಾಲಯ ಉಳಿಸಿ, ಶೈವಾಗಮ ಕ್ಷೇತ್ರ ಶ್ರೀ ಕುಕ್ಕೆ ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.