ಮಲ್ಪೆ ಬೀಚ್: ವಿಂಚ್ ಬೋಟ್ ಪ್ಯಾರಾಸೈಲಿಂಗ್ ಮಾಡುತ್ತಿದ್ದ ವೇಳೆ ಬಿದ್ದ ಬಾಲಕ
ಮಲ್ಪೆ: ಪ್ರವಾಸಿಗ ಬಾಲಕ ವಿಂಚ್ ಬೋಟ್ ಪ್ಯಾರಾಸೈಲಿಂಗ್ ಮಾಡುತ್ತಿದ್ದ ವೇಳೆ ಬಿದ್ದು ಗಾಯಗೊಂಡ ಘಟನೆ ಶುಕ್ರವಾರ ಮಲ್ಪೆ ಬೀಚ್ ನಲ್ಲಿ ಸಂಭವಿಸಿದೆ.
ಅವಘಡದಲ್ಲಿ ಬೆಂಗಳೂರು ಮೂಲದ ಇಕ್ಷ್ಯಾನ್ ಚೌಧರಿ (12) ಎಂಬ ಬಾಲಕ ಗಾಯಗೊಂಡಿದ್ದಾನೆ.
ಸೂಕ್ತ ಸುರಕ್ಷತ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ಅನಾಹುತ ಸಂಭವಿಸಿದ್ದು, 10 ಮೀಟರ್ ಎತ್ತರದಿಂದ ಬೋಟಿಗೆ ಬಿದ್ದುಸಣ್ಣ ಪುಟ್ಟ ಗಾಯಗಳಾಗಿದೆ.





