ಬೆಳ್ಳಾರೆ: ಮನೆಯಿಂದ ಅಂಗಡಿಗೆ ತೆರಳಿದ್ದ ವಿದ್ಯಾರ್ಥಿ ನಾಪತ್ತೆ
ಬೆಳ್ಳಾರೆ: ವಿದ್ಯಾರ್ಥಿಯೋರ್ವ ನಾಪತ್ತೆಯಾಗಿದ್ದು ಆತನ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬೆಳ್ಳಾರೆ ಸಮೀಪದ ಚೆನ್ನಾರ್ ಕುಂದಡ್ಕದ ವಿದ್ಯಾರ್ಥಿ ತಲಪಾಡಿಯಲ್ಲಿ ನಾಪತ್ತೆಯಾಗಿದ್ದಾನೆ.
ಅಂಗಡಿಗೆ ಎಂದು ತೆರಳಿದ ಆತ ನಾಪತ್ತೆಯಾಗಿರುವ ಘಟನೆ ವದರಿಯಾಗಿದೆ. ಕಾಣೆಯಾದ ವಿದ್ಯಾರ್ಥಿಯನ್ನು ಹನೀಫ್ ಎಂಬವರ ಪುತ್ರ ಬಿಲಾಲ್ ಎಂದು ಗುರುತಿಸಲಾಗಿದೆ.
ಬಾಲಕ ಮೂಲತಃ ಚೆನ್ನಾರಿನ ಕುಂಡಡ್ಕ ನಿವಾಸಿಯಾಗಿದ್ದು ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದು, ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಎಂದಿನಂತೆ ಶಾಲೆಗೆ ಹೋಗಿ ಮತ್ತೆ ಸಂಜೆ ಮಸೀದಿಗೆ ಬಂದಿದ್ದು ಅಲ್ಲಿಂದ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟ ಬಿಲಾಲ್ ಮತ್ತೆ ಬರಲಿಲ್ಲ ಎನ್ನಲಾಗಿದೆ.
ಗೋಧಿ ಮೈಬಣ್ಣ ಹೊಂದಿದ್ದು ಎತ್ತರ ನಾಲ್ಕೂವರೆ ಅಡಿ ಉದ್ದವಿದ್ದು ಕಾಣಲು ಸೌಮ್ಯ ಸ್ವಭಾವದ ಬಾಲಕನಾಗಿದ್ದು ಯಾರಾದರೂ ಕಂಡು ಬಂದಲ್ಲಿ ತಕ್ಷಣ ಈ ನಂಬರಿಗೆ 9686123077 ತಿಳಿಸುವಂತೆ ಮನೆಯವರು ವಿನಂತಿಸಿಕೊಂಡಿದ್ದಾರೆ.





