December 18, 2025

ಉಳ್ಳಾಲ: ಹಲ್ಲೆಗೈದು ಹಲ್ಲು ಉದುರಿಸಿ ಪರಾರಿಯಾಗಿದ್ದ ರಿಕ್ಷಾ ಚಾಲಕ ಪೊಲೀಸರ ವಶಕ್ಕೆ

0
IMG-20231114-WA0010.jpg



ಉಳ್ಳಾಲ: ಮಂಗಳೂರು ಹೊರವಲಯದ ಉಳ್ಳಾಲ ಸಮೀಪದ ಕುಂಪಲದಲ್ಲಿ ಸಹೋದ್ಯೋಗಿಗೆ ಹಲ್ಲೆಗೈದು ಹಲ್ಲುಗಳನ್ನು ಉದುರಿಸಿ ಪರಾರಿಯಾಗಿದ್ದ ಆರೋಪಿ ರಿಕ್ಷಾ ಚಾಲಕನನ್ನು ಘಟನೆ ನಡೆದ 24ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ರೋಕೇಶ್(37) ಯಾನೆ ಸೈಕೋ ರೋಸ್ ಎಂಬಾತನನ್ನು ಬಂಧಿಸಲಾಗಿದ್ದು, ಸುಶಾಂತ್(31) ಎಂಬವರು ಹಲ್ಲೆಗೆ ಒಳಗಾದವರಾಗಿದ್ದಾರೆ.

ಇವರಿಬ್ಬರೂ ಕೂಡ ಕುಂಪಲದ ಬೈಪಾಸ್ ಆಟೋ ರಿಕ್ಷಾ ಪಾರ್ಕಿನಲ್ಲಿ ರಿಕ್ಷಾ ಚಾಲಕರಾಗಿ ಕೆಲಸವನ್ನು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಕಳೆದ ಆದಿತ್ಯವಾರ ಆರೋಪಿ ರೋಕೇಶ್ ಯಾನೆ ಸೈಕೋ ರೋಸ್ ಸುಶಾಂತ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖಕ್ಕೆ ಬಲವಾಗಿ ಥಳಿಸಿದ್ದು ಎರಡು ಹಲ್ಲುಗಳು ಉದುರಿ ಹೋಗಿದೆ.ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುಶಾಂತ್ ರವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬಳಿಕ ಅವರು ಸಹೋದ್ಯೋಗಿ ರೋಕೇಶ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಠಾಣೆಯಲ್ಲಿ ತನ್ನ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಇನ್ನು ಆರೋಪಿ ರೋಕೇಶ್ ಯಾನೆ ಸೈಕೊ ರೋಸ್ ಕುಂಪಲ ನಿವಾಸಿಯಾಗಿದ್ದು ಮಾದಕ ವ್ಯಸನಿಯಾಗಿದ್ದ ಅಂತ ಹೇಳಲಾಗ್ತ ಇದೆ.ಮಾತ್ರವಲ್ಲ ಈತನ ಹಲವು ಆರೋಪಗಳು ಕೂಡ ಕೇಳಿ ಬಂದಿವೆ.

ಜೊತೆಗೆ ಆರೋಪಿಯ ಸಹೋದರ ವೃತ್ತಿಪರ ವಕೀಲನಾಗಿದ್ದು ಆತನ ಧೈರ್ಯದಿಂದಲೇ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ಅಂತ ಹೇಳಲಾಗ್ತ ಇದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

You may have missed

error: Content is protected !!