ಮದುವೆಯಾಗಿ 3 ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಮಹಿಳೆಯ ಕೊಲೆ
ಕೋಲಾರ: ಮದುವೆಯಾಗಿ 3 ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂದು ಮಹಿಳೆಯೊಬ್ಬಳನ್ನು ಕೊಲೆಗೈದ ಘಟನೆ ನಗರದ ವಿನಾಯಕ ನಗರದಲ್ಲಿ ನಡೆದಿದೆ.
ಮೃತ ಮಹಿಳೆಯ ಸಂಬಂಧಿಕರು ಆಕೆಯ ಪತಿ ಹಾಗೂ ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಮಕ್ಕಳಾಗಿಲ್ಲ ಎಂದು ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಮೃತ ಮಹಿಳೆಯನ್ನು ಸೆಹರ್ ಅಂಜುಂ (23) ಎಂದು ಗುರುತಿಸಲಾಗಿದೆ. 3 ವರ್ಷದ ಹಿಂದೆ ಅಪ್ಜಲ್ ಎಂಬಾತ ಆಕೆಯನ್ನು ಮದುವೆಯಾಗಿದ್ದ. ಮಹಿಳೆಯ ಪತಿ ಅಫ್ಜಲ್ ಹಾಗೂ ಅತ್ತೆ ತನ್ವೀರ್ ಬೇಗಂ ವಿರುದ್ಧ ಕೊಲೆಗೈದು ನೇಣು ಬಿಗಿದ ಆರೋಪ ಕೇಳಿ ಬಂದಿದೆ.
ಮೃತ ಮಹಿಳೆಗೆ ಮಕ್ಕಳಾಗಿಲ್ಲ ಎಂದು ವೈದ್ಯರು ಹಾಗೂ ನಾಟಿ ಔಷಧ ಸಹ ಕೊಡಿಸಲಾಗಿದೆ. ಆದರೂ ಮಕ್ಕಳಾಗಿಲ್ಲ ಎಂದು ಕಿರುಕುಳ ನೀಡಲಾಗಿದೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.





