ವಿಟ್ಲ: ಅಟೋ ಚಾಲಕ ಮಾಲಕರ ಸಂಘದಿಂದ ರಕ್ತದಾನ ಶಿಬಿರ
ವಿಟ್ಲ ; ವಿಟ್ಲ ಆಟೋ ಚಾಲಕರ ಮತ್ತು ಮಾಲಕರ ಸೌಹಾರ್ದ ಸಂಘ (ರಿ) ( ಆರ್‌ಸಿ.ಎಂಎಸ್ . ) ವಿಟ್ಲ ಇದರ 38ನೇ ವಾರ್ಷಿಕ ಪ್ರಯುಕ್ತ ಸಾರ್ವಜನಿಕ ರಕ್ತದಾನ ಶಿಬಿರ ,ಸದಸ್ಯರ ಗುರುತಿನ ಚೀಟಿ ವಿತರಣೆ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ನಡೆಯಿತು.
ಆರ್‌ಸಿಎಂಎಸ್ ಇದರ ಅಧ್ಯಕ್ಷ ಹರಿಣಾಕ್ಣ ಮಾರುಗುರಿ ಇವರ ಅದ್ಯಕ್ಷತೆಯಲ್ಲಿ ವಿಟ್ಲದ ಮಾದರಿ ಹಿ,ಪ್ರಾ, ಶಾಲೆಯಲ್ಲಿ ಕಾರ್ಯಕ್ರಮ ಜರಗಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ (ಆರ್‌ಎಂಎಸ್‌ಎ ) ರವಿಶಂಕರ್ ವಿಟ್ಲ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದ ಈ ಸಮಾರಂಭದಲ್ಲಿ ವಿಟ್ಲ ಆರಕ್ಷಕ ಠಾಣೆಯ ಠಾಣಾಧಿಕಾರಿ ಗೋವಿಂದ ದೊಡ್ಡಮನೆ ಇವರು ಸಂಘದ ಸದಸ್ಯರ ಗುರುತಿನ ಚೀಟಿ ವಿತರಣೆ ಮಾಡಿದರು.
ಗೌರವಾದ್ಯಕ್ಷರಾದ ಸಂದೇಶ್ ಶೆಟ್ಟಿ ಬಿಕ್ನಾಜೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸುಮಾರು 60ಕ್ಕೂ ಮಿಕ್ಕಿ ಜನರು ರಕ್ತದಾನ ಮಾಡಿದ ಸಮಾರಂಭದಲ್ಲಿ ಮುಖ್ಯ
ಅತಿಥಿಗಳಾಗಿ ವಿಟ್ಲ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ್ ಬಲ್ಲಾಳ್,
ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ರವಿ ಪ್ರಕಾಶ್ ವಿಟ್ಲ , ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪಿ.ಜಯಂತ ಪೂರ್ಲಪ್ಪಾಡಿ,
ವಿಎಸ್‌ಎಸ್‌ಎನ್ ಬ್ಯಾಂಕ್ ಕೊಡಂಗಾಯಿ ಇದರ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಶ ರೈ ಎರ್ಮನಿಲೆ ,ವಿಟ್ಲ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ವಿ.ಬಾಬು, ವಿಟ್ಲ ಬಿಲ್ಲವ ಸಂಘದ ಮಾಜಿ ಗೌರವಾಧ್ಯಕ್ಷ ಪ್ರಕಾಶ್ ವಿಟ್ಲ,
ಸಿವಿಲ್ ಇಂಜಿನಿಯರ್ ಚಂದ್ರಹಾಸ ಗೌಡ ಬನ, ಅರ್‌ಸಿಎಂಎಸ್ ಇದರ ಮಾಜಿ ಗೌರವಾಧ್ಯಕ್ಷ
ಕೆ ವಿ ಚಂದ್ರಶೇಖರ ,ವಕೀಲರು ಎರ್ಮನಿಲೆ,
ಇಂಡಿಯನ್ ರೆಡ್ ಕ್ರಾಸ್ ನ ಪ್ರವೀಣ್ ಕುಮಾರ್, ಕರ್ನಾಟಕ ಭಾವೈಕ್ಯತಾ ಪರಿಷತ್. ದ.ಕ.ಜಿಲ್ಲಾ ಉಪಾಧ್ಯಕ್ಷರಾದ ಅಬೂಬಕರ್ ಅನಿಲಕಟ್ಟೆ ವಿಟ್ಲ,
ರಫೀಕ್ ಪರ್ತಿಪ್ಪಾಡಿ
. ದ.ಕ. ಗ್ಯಾರೇಜ್ ಮಾಲಕರ ಸಂಘ ವಿಟ್ಲ ವಲಯ ಇದರ ಗೌರವ ಸಲಹೆಗಾರರಾದ ಸುಂದರ ಆಚಾರ್ಯ ನೆಗಳಗುಳಿ,ಉಧ್ಯಮಿ
ದಿನಕರ ಆಳ್ವ ವಿಟ್ಲ.
. ಕೊಡಂಗಾಯಿ ಶಾಲೆಯ ಮಾಜಿ ಅಧ್ಯಕ್ಷರಾದ ಹಮೀದ್ ಟಿ.ಕೊಡಂಗಾಯಿ,
ಸತೀಶ್ ಕಲ್ಲೆಗ. ಕಡಂಬು ಶಾಲೆಯ ಅಧ್ಯಕ್ಷ ಬಿ.ಎಂ.ಹಸೈನಾರ್ ಕಡಂಬು ,
ಪವಿತ್ರ ಪೂಂಜ
ಹೈದರ್ ಅಲಿ ಕಡಂಬು.
ಮುಹಮ್ಮದ್ ಇರ್ಷಾದ್ ಕೊಡಂಗಾಯಿ ,
ಪ್ರಕಾಶ್ ಮಂಜುಶ್ರೀ ವಿಟ್ಲ. ಬಿ.ಎಂ.ಎಸ್ ಇದರ ಅಧ್ಯಕ್ಷರಾದ ವಸಂತ ವಿಟ್ಲ, ಸಿಐಟಿಯು ವಿಟ್ಲ ಇದರ ಅಧ್ಯಕ್ಷ ರಮೇಶ ಶಿವಾಜಿನಗರ, ಸಾಲೆತ್ತೂರು ರಿಕ್ಷಾ ಮಾಲಕ ಚಾಲಕ ಸಂಘ ಅಧ್ಯಕ್ಷ ಸೀತಾರಾಮ ಗೌಡ,
ಕುಡ್ತಮುಗೇರು ರಿಕ್ಷಾ ಚಾಲಕ ಮಾಲಕರ ಸಂಘ ದ ಅಧ್ಯಕ್ಷ ಬಿ.ಎಂ.ಶರೀಫ್ ಸ್ನೇಹ ಸಂಗಮ ಅಟೋ ಚಾಲಕ ಮತ್ತು ಮಾಲಕರ ಸಂಘ ಮಜ್ಜೋಣಿ ಇದರ ಅಧ್ಯಕ್ಷ ಅಬ್ದುಲ್ ನಿಸಾರ್,
ನೇತ್ರಾವತಿ ಆಟೋ ಚಾಲಕ ಮಾಲಕರ ಸಂಘ ಮಂಗಲಪದವು ಇದರ ಅಧ್ಯಕ್ಷ ಅಶೋಕ್ ಮಚ್ಚ , ಆರ್‌ಸಿಎಂಎಸ್ ಇದರ ಉಪಾಧ್ಯಕ್ಷ ಮಾಧವ ಕುರ್ಣಿಯಾ ,ಕೋಶಾಧಿಕಾರಿ ನಾಗೇಶ್ ಪೂರ್ಲಪ್ಪಾಡಿ,ಜತೆ ಕಾರ್ಯದರ್ಶಿ ಅಶ್ರಫ್ ಕಡಂಬು, ಮುಂತಾದವರು ವೇದಿಕೆಯಲ್ಲಿದ್ದರು.
ಸಂಘದ ಸದಸ್ಯರಾದ ಆಶ್ರಫ್ ಅನಿಲಕಟ್ಟೆ, ವಸಂತ ಅನಿಲಕಟ್ಟೆ, ಯಹ್ಯಾ ಪರ್ಲಾರ್,ಜೋಯ್ಸನ್ ಸೇರಾಜೆ,ಸಿದ್ದೀಕ್ ಅನಿಲಕಟ್ಟೆ, ಪೂವಪ್ಪ ಬೈರಿಕಟ್ಟೆ,ಹಸೈನಾರ್ ( ಪುತ್ತು) ಕೊಡಂಗಾಯಿ,ಮುಫ್ತಿ ಪರ್ತಿಪ್ಪಾಡಿ,ಯಹ್ಯಾ ದರ್ಖಾಸ್,ಯಾದವ ಕಡಂಬು ,ಯೂಸೂಫ್ ಕಡಂಬು,ಇಬ್ರಾಹಿಂ ಕುಕ್ಕಿಲ ,ಕರೀಂ ಟಿಪ್ಪು ನಗರ,ಮಹಮೂದ್ ಕಡಂಬು ,ಉಮ್ಮರ್ ಪರ್ಲಾರ್,ರಝಾಕ್ ಕೊಡಂಗಾಯಿ,ಅಶ್ರಫ್ ಸೇರಾಜೆ,ಸಿದ್ದೀಕ್ ಪರ್ತಿಪ್ಪಾಡಿ, ರವಿ ರೋಡ್ರಿಗಸ್,ಇಬ್ರಾಹಿಂ ಕಡ್ತಮುಗೇರು ,ಅಸ್ಲಾಂ ವಿಟ್ಲ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ 69 ನೇ ಬಾರಿ ದಾಖಲೆಯ ರಕ್ತದಾನ ಮಾಡಿದ ಇಕ್ಬಾಲ್ ಕೋಲ್ಪೆ ಇವರನ್ನು ಸನ್ಮಾನಿಸಲಾಯಿತು.ಹಾಗೂ ಎಲ್ಲಾ ರಕ್ತದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಆರ್‌ಸಿಎಂಸಿ ಯ ಕಾರ್ಯದರ್ಶಿ ಅಬ್ದುಲ್ ಮಜೀದ್ ಟಿ ಎಂ ಕೊಡಂಗಾಯಿ ಸ್ವಾಗತಿಸಿ , ಜನಾರ್ದನ ಪೂಜಾರಿ ಅನಿಲಕಟ್ಟೆ ವಂದಿಸಿದರು.