February 19, 2026

ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿ: ತಂದೆ, ಮಗ ಸಾವು

0
image_editor_output_image1704957573-1699855568461.jpg

ರಾಮನಗರ: ಬೈಕ್ ಮತ್ತು ಕೆಎಸ್ಆರ್ ಟಿಸಿ ಬಸ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಂದೆ ಮಗ ಸಾವಿಗೀಡಾಗಿರುವ ಘಟನೆ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಕೆರೆ ಏರಿ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಸಿದ್ದಯ್ಯ (58) ಇವರ ಮಗ ಅರುಣ್ (27) ಮೃತ ದುರ್ದೈವಿಗಳು. ಚನ್ನಪಟ್ಟಣ ತಾಲ್ಲೂಕಿನ ಕೋಟಮಾರನಹಳ್ಳಿ ಗ್ರಾಮದ ಇವರು ಕೆಲಸ ನಿಮ್ಮಿತ್ತ ಚನ್ನಪಟ್ಟಣಕ್ಕೆ ಬೈಕ್ ನಲ್ಲಿ ಬರುವಾಗ ಎದುರಿನಿಂದ ಬಂದ ಕೆಎಸ್ ಆರ್ಟಿಸಿ ಬಸ್ಸು ಇವರ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಅರುಣ್ ಸ್ಥಳದಲ್ಲೇ ಸಾವಿಗೀಡಾದರೆ‌ ಸಿದ್ದಯ್ಯ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವಿಗೀಡಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!