ಸೇಬುಗಳನ್ನು ತುಂಬಿದ್ದ ಲಾರಿ ಪಲ್ಟಿ: ರಸ್ತೆಯಲ್ಲಿ ಬಿದ್ದಿದ್ದ ಸೇಬುಗಳನ್ನು ಕ್ಷಣಮಾತ್ರದಲ್ಲೇ ತುಂಬಿಕೊಂಡ ಸ್ಥಳೀಯರು
ಬಳ್ಳಾರಿ: ಸೇಬುಗಳನ್ನು ತುಂಬಿದ್ದ ಲಾರಿ ಪಲ್ಟಿಯಾಗಿ ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದಿದ್ದ ಸೇಬುಗಳನ್ನು ಕ್ಷಣಮಾತ್ರದಲ್ಲೇ ಸಾರ್ವಜನಿಕರು ತುಂಬಿಕೊಂಡು ಹೋಗಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಬಳಿ ಸೇಬುಗಳನ್ನು ತುಂಬಿದ್ದ ಲಾರಿ ಪಲ್ಟಿಯಾಗಿದೆ.
ಪೊಲೀಸರು ಸ್ಥಳಕ್ಕಾಗಮಿಸಿದರೂ ಸ್ಥಳೀಯರು ಕ್ಯಾರೆ ಎನ್ನದೆ ಸೇಬುಗಳನ್ನು ಚೀಲಗಳಲ್ಲಿ ತುಂಬಿಕೊಂಡಿದ್ದಾರೆ. ಈ ವೇಳೆ ಪೊಲೀಸರು ಏನೂ ಮಾಡಲಾಗದೆ ಅಸಹಾಯಕರಂತೆ ನಿಂತಿದ್ದಾರೆ.





