ಕಾರವಾರ: ಪೊಲೀಸರ ಮೇಲೆ ಹಲ್ಲೆ, 11 ಮಂದಿ ಆರೋಪಿಗಳ ಬಂಧನ
ಕಾರವಾರ: ಯುವಕರ ಗುಂಪಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಕಾರವಾರದ ಬೈತಖೋಲ್ ಪ್ರದೇಶದಲ್ಲಿ ಕರ್ತವ್ಯಕ್ಕೆ ತೆರಳಿದ್ದ ಪೊಲೀಸ್ ಸಿಬ್ಬಂದಿ ಗಣೇಶ ಕುರಿಯವರ್, ಹರೀಶ ಗವಾಣಿಕರ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಗಳಾಗಿದ್ದು ಗಾಯಗೊಂಡ ಪೊಲೀಸರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಂಧಿತರು ಕಾರವಾರದ ಸುನೀಲ ಗೌಡ, ಮಂಜುನಾಥ ಗೌಡ, ಸಂದೇಶ್, ರಘುವೀರ, ನಿತಿನ್ ಗೌಡ, ಗಗನ ಗೌಡ, ಅನುರಾಗ ಗೌಡ, ಉಮೇಶ್ ಜನಕಪ್ರಸಾದ್, ವಿತೇಶ ಗೌಡ, ಯುವರಾಜ ಗೌಡ, ಸುಚಿತ ಗೌಡ ಎಂಬವರಾಗಿದ್ದು ತಡರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರು ಗುಂಪು ಸೇರಿಕೊಂಡಿದ್ದ ಯುವಕರಿಗೆ ಮನೆಗೆ ತೆರಳುವಂತೆ ಬುದ್ದಿವಾದ ಹೇಳಿದ್ದರು. ಇದನ್ನು ಪ್ರಶ್ನಿಸಿ ಇಬ್ಬರು ಪೊಲೀಸರ ಮೇಲೆ 11 ಜನ ಹಲ್ಲೆ ನಡೆಸಿದ್ದರು.
ಘಟನೆ ಸಂಬಂಧ ನಗರ ಠಾಣೆ ಪೊಲೀಸರು 11 ಜನರನ್ನು ಬಂಧನ ಮಾಡಿದ್ದಾರೆ.





