ಮಂಗಳೂರು: 75,444 ಮೆ.ಟನ್ ಪ್ರಮಾಣದ ಮರಳು ಸ್ಟಾಕ್‍ಯಾರ್ಡ್‍ಗಳಲ್ಲಿ ಲಭ್ಯ
ಮಂಗಳೂರು: ಜಿಲ್ಲೆಯ ನಾನ್ ಸಿಆರ್‍ಝಡ್ ಪ್ರದೇಶದ ನದಿ ಪಾತ್ರಗಳಲ್ಲಿ 25 ಮರಳು ಗಣಿ ಗುತ್ತಿಗೆಗಳನ್ನು ಮಂಜೂರು ಮಾಡಲಾಗಿದ್ದು, ಆ ಪೈಕಿ 24 ಮರಳು ಗಣಿ ಗುತ್ತಿಗೆಗಳು ಚಾಲ್ತಿಯಲ್ಲಿವೆ.
ಮುಂಗಾರಿನ ಕಾರಣಕ್ಕೆ ಪರಿಸರ ವಿಮೋಚನಾ ಪತ್ರದಲ್ಲಿ ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಜೂನ್‍ನಿಂದ ಅಕ್ಟೋಬರ್ 15 ರವರೆಗೆ ಮರಳು ತೆಗೆಯಲು ನಿರ್ಬಂಧವಿರುತ್ತದೆ.
ಆದರೆ ಮಾನ್ಸೂನ್ ಅವಧಿಯಲ್ಲಿ ಈ ಮರಳು ಬ್ಲಾಕ್ ಗುತ್ತಿಗೆ ಪ್ರದೇಶಗಳ ಸ್ಟಾಕ್‍ಯಾರ್ಡ್‍ಗಳಲ್ಲಿ ಸುಮಾರು 1,02,467 ಮೆಟ್ರಿಕ್ ಟನ್ ಮರಳು ದಾಸ್ತಾನು ಲಭ್ಯವಿದ್ದು, ಇಲ್ಲಿಯವರೆಗೆ 27,023 ಮೆ.ಟನ್ ಪ್ರಮಾಣದ ಮರಳು ಜಿಲ್ಲೆಯಲ್ಲಿನ ಕಾಮಗಾರಿಗಳಿಗೆ ಪೂರೈಕೆಯಾಗಿದ್ದು, ಇನ್ನೂ 75,444 ಮೆ.ಟನ್ ಪ್ರಮಾಣದ ಮರಳು ಸ್ಟಾಕ್‍ಯಾರ್ಡ್‍ಗಳಲ್ಲಿ ಲಭ್ಯವಿದೆ.
ನ್ ಸಿಆರ್‍ಝಡ್ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಮರಳು ಗುತ್ತಿಗೆದಾರರು ದಿನಾಂಕ 30-08-2023 ರಂದು ಸಲ್ಲಿಸಿರುವ ಮನವಿಯಲ್ಲಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿಗಳು 1994 ರ ನಿಯಮ 31-ವೈ ರಂತೆ ವಾರ್ಷಿಕ ಉಪ ಖನಿಜದ ಉತ್ಪಾದನೆಯ ಶೇಕಡ 50 ರಷ್ಟು ಖನಿಜ ಉತ್ಪಾದನೆ ಮಾಡಿ ಸಾಗಾಟ ಮಾಡುವಂತೆ ಕಡ್ಡಾಯವಿರುವ ನಿಯಮವನ್ನು ಸಡಿಲಗೊಳಿಸಬೇಕು ಮತ್ತು ಜಿಲ್ಲೆಯಲ್ಲಿ ಮರಳಿನ ಬೇಡಿಕೆ ಕಡಿಮೆಯಿರುವುದರಿಂದ ಅಂತರ್ ಜಿಲ್ಲಾ ಮರಳು ಸಾಗಾಟಕ್ಕೆ ಇರುವ ನಿರ್ಬಂಧವನ್ನು ತೆರವುಗೊಳಿಸಲು ಕೋರಿಕೊಂಡಿದ್ದಾರೆ.
ಇದು ಜಿಲ್ಲೆಯಲ್ಲಿ ಮರಳು ಸಾಕಷ್ಟು ಲಭ್ಯವಿದ್ದು, ಮರಳು ಅಭಾವ ಇಲ್ಲದಿರುವುಕ್ಕೆ ಕೈಗನ್ನಡಿಯಾಗಿದೆ. ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




