December 19, 2025

ವಿಟ್ಲ: ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ “ಕನ್ನಡ ಡಿಂಡಿಮ 2023

0
IMG-20231108-WA0042.jpg

ವಿಟ್ಲ: ಕಂಬಳಬೆಟ್ಟುವಿನ ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಅಂಗವಾಗಿ
“ಕನ್ನಡ ಡಿಂಡಿಮ -2023” ಬಾರಿಸು ಕನ್ನಡ ಡಿಂಡಿಮವ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲಾ ಆವರಣದಲ್ಲಿ ನಡೆದ ಕನ್ನಡ ಡಿಂಡಿಮ ಎಂಬ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲೇಖಕರು ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಇಸ್ಮತ್ ಪಜೀರ್ ರವರು ನಾವು ವಿಶ್ವದ ಯಾವುದೇ ಮೂಲೆಯಲ್ಲಿರಲಿ, ಯಾವುದೇ ಭಾಷೆಯನ್ನು ಕಲಿಯಲಿ, ಕೊನೆಗೆ ನಮ್ಮ ಮನಸ್ಸು ಬಾಷೆ ಎಲ್ಲವೂ
ನಮ್ಮ ರಾಜ್ಯ, ನಮ್ಮ ಬಾಷೆಗಾಗಿ ಹಾತೊರಿಯುತ್ತಿರುವಂತಾಗಿರಬೇಕು, ಕನ್ನಡ ಬಾಷೆ, ಸಂಸ್ಕೃತಿಯನ್ನು ಉಳಿಸುವ ಕರ್ತವ್ಯ
ನಮ್ಮೆಲ್ಲರ ಮೇಲಿದೆ ಎಂದು ಹೇಳಿ ರಾಜ್ಯೋತ್ಸವದ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜನಪ್ರಿಯ ಶಾಲಾ ಮಕ್ಕಳು ಕನ್ನಡ ನಾಡು ನುಡಿ ಗೆ ಸಂಬಂಧಿಸಿದ ಭಾಷಣ, ಹಾಡು , ನೃತ್ಯ ಹಾಗೂ
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಹಲವು ಕನ್ನಡ ಕವಿಗಳ, ಹೋರಾಟಗಾರರ ವೇಷ ಧರಿಸಿದ ಮಕ್ಕಳ ಛದ್ಮವೇಶವು ಪ್ರಮುಖ ಆಕರ್ಷಣೆಯಾಗಿತ್ತು. ಮೂರನೇ ತರಗತಿಯ ದಿಶಾನ್ ಮತ್ತು ಆರನೇ ತರಗತಿಯ ಚುಕ್ಕಿ ಎಂಬ ಇಬ್ಬರು ವಿದ್ಯಾರ್ಥಿಗಳು ನಡೆಸಿಕೊಟ್ಟ ಲಾವಣಿ ಮತ್ತು ಏಕ ಪಾತ್ರಾಭಿನಯವು ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಆಡಳಿತಾಧಿಕಾರಿ
ಸಫ್ವಾನ್ ಪಿಲಿಕಲ್ ರವರು ಸಂಧರ್ಬೋಚಿತವಾಗಿ ಮಾತನಾಡಿ ರಾಜ್ಯೋತ್ಸವದ ಶುಭ ಹಾರೈಸಿದರು.

ವೇದಿಕೆಯಲ್ಲಿ ಜನಪ್ರಿಯು ಸೆಂಟ್ರಲ್ ಸ್ಕೂಲ್ ನ ಆಡಳಿತ ಸಮಿತಿಯ ನಿರ್ದೇಶಕ ನೌಶೀನ್ ಬದ್ರಿಯಾ, ಶಾಲಾ ಪ್ರಾಂಶುಪಾಲ ಲಿಬಿನ್ ಕ್ಸೇವಿಯರ್ ಉಪಸ್ಥಿತರರಿದ್ದರು. ವಿದ್ಯಾರ್ಥಿಗಳಾದ ಝುಲ್ಫ ಸ್ವಾಗತಿಸಿ, ತ್ವಾಹ ವಂದಿಸಿದರು. ಆಫ್ಫಾನ್ ಮತ್ತು ರಿಲ್ಹ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!