ಗಗನಕ್ಕೇರಿದ್ದ ಈರುಳ್ಳಿ ದರ ಇಳಿಕೆ
ಬೆಂಗಳೂರು: ಗಗನಕ್ಕೇರಿದ್ದ ಈರುಳ್ಳಿ ದರವನ್ನು ಇಳಿಕೆ ಮಾಡುವಲ್ಲಿ ಸರ್ಕಾರ ರೂಪಿಸಿದ್ದ ತಂತ್ರ ಕೊನೆಗೂ ಫಲ ನೀಡಿದೆ. ಸರ್ಕಾರದ ಪ್ರಯತ್ನ ಪರಿಣಾಮವಾಗಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ 55 ರಿಂದ 50 ರೂ.ಗೆ ಇಳಿಕೆಯಾಗಿದೆ. ಆದರೆ, ಚಿಲ್ಲರೆ ಅಂಗಡಿಗಳಲ್ಲಿ ದರ ಇನ್ನೂ ಕಡಿಮೆಯಾಗಿಲ್ಲ.
ಬೆಲೆ ಏರಿಕೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಭಾವಿಸಿರುವ ಚಿಲ್ಲರೆ ಅಂಗಡಿಗಳು 5 ಕೆಜಿ ಈರುಳ್ಳಿಯನ್ನು 390-400 ರೂ.ಗೆ ಮಾರಾಟ ಮಾಡುತ್ತಿವೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ರೈತರಲ್ಲಿ ಈರುಳ್ಳಿ ಬೆಳೆ ಲಭ್ಯವಿದ್ದು, ಬೆಲೆ ಹೆಚ್ಚಳದ ನಿರೀಕ್ಷೆಯಲ್ಲಿದ್ದರು. ಕೆಲ ದಿನಗಳ ಹಿಂದಷ್ಟೇ ವಿಜಯಪುರದಲ್ಲಿ ಪ್ರತಿ ಕೆಜಿ ಈರುಳ್ಳಿಯನ್ನು ರೂ.100ಕ್ಕೆ ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಈ ರೈತರಲ್ಲಿ ಸಂತಸವನ್ನು ತರಿಸಿತ್ತು.





