ದಾಂಪತ್ಯ ಕಲಹ: ಪೊಲೀಸರ ಸಂಧಾನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಹುಬ್ಬಳ್ಳಿ: ಗಂಡ-ಹೆಂಡತಿ ಜಗಳದ ನಡುವೆ ಪೊಲೀಸರ ಸಂಧಾನಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಹುಬ್ಬಳ್ಳಿ ಕೋಟಿಲಿಂಗೇಶ್ವರ ನಗರದಲ್ಲಿ ನಡೆದಿದೆ.
ನಿಖಲ್ (28) ಆತ್ಮಹತ್ಯೆ ಮಾಡಿಕೊಂಡ ಪತಿ. 11 ತಿಂಗಳ ಹಿಂದೆ ನಿಖಿಲ್, ಪ್ರೀತಿ ಎಂಬ ಯುವತಿಯನ್ನು ಮದುವೆಯಾಗಿದ್ದರು.
ಆದರೆ ಗಂಡ-ಹೆಂಡತಿ ನಡುವೆ ಆರಂಭದಿಂದಲೂ ಸಾಮರಸ್ಯ ಮೂಡದೇ ವೈಮನಸ್ಸು ಬೆಳೆದು ನಿತ್ಯ ಜಗಳವಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಪ್ರೀತಿ ತವರು ಮನೆಗೆ ಹೋಗಿದ್ದಳು.