May 9, 2026

ಮಂಗಳೂರು: ಸುತ್ತಾಡಲು ಬರದ ಯುವತಿ: ಕೋಪಗೊಂಡು ಕಟ್ಟಡಕ್ಕೆ ಕಲ್ಲು ಎಸೆದ ಪ್ರಿಯಕರ

0
image_editor_output_image1290697509-1699004775692.jpg

ಮಂಗಳೂರು: ತನ್ನ ಲವರ್ ಔಟಿಂಗ್ ಬರಲಿಲ್ಲ ಅಂತಾ ಆಕೆ ಕೆಲಸ ಮಾಡುತ್ತಿದ್ದ ಕಟ್ಟಡಕ್ಕೆ ಯುವಕನೊಬ್ಬ ಕಲ್ಲು ತೂರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಸೆಂಟ್ ಆಗ್ನೇಸ್ ಕಾಲೇಜು ಮುಂಭಾಗದಲ್ಲಿ ನಡೆದಿದೆ.

ಕಲ್ಲೆಸೆತದಿಂದ ಕಟ್ಟಡದ ಗಾಜು ಪುಡಿಯಾಗಿದ್ದರಿಂದ ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿದ್ದಾರೆ.

ಸುಳ್ಯ ನಿವಾಸಿ ವಿವೇಕ್ (18) ಸುರೇಶ್ ಶೆಟ್ಟಿ ಎಂಬುವವರ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಅದರಂತೆ ನಿನ್ನೆ (ನವೆಂಬರ್ 3) ಸಂಜೆ ಔಟಿಂಗ್ಗೆ ಬರುವಂತೆ ಕರೆ ಮಾಡಿದ್ದಾನೆ.

ಆದರೆ, ಯುವತಿ ಔಟಿಂಗ್ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪ್ರಿಯಕರ ವಿವೇಕ್, ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ. ಘಟನೆಯಲ್ಲಿ ಕಟ್ಟಡದ ಗಾಜು ಪುಡಿಯಾಗಿದ್ದು, ಸಾರ್ವಜನಿಕರು ವಿವೇಕ್ನನ್ನು ಹಿಡಿದು ಥಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!