ಕಾಸರಗೋಡು: 1 ಕಿಲೋ ಗಾಂಜಾ ಸಹಿತ ಇಬ್ಬರ ಬಂಧನ
ಕಾಸರಗೋಡು: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಸೀತಾಂಗೋಳಿಯ ಹನೀಫ್ ಬಿ . (40) ಮತ್ತು ಫೈಝಲ್ (38) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಒಂದು ಕಿಲೋ ಗಾಂಜಾ ಸಹಿತ ಇಬ್ಬರನ್ನು ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ.
ಅಬಕಾರಿ ದಳದ ಸಿಬಂದಿಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಗಾಂಜಾ ಸಾಗಾಟ ಪತ್ತೆ ಮಾಡಿದ್ದಾರೆ.
ಫೈಝಲ್ ವಿರುದ್ಧ ಮಾದಕ ವಸ್ತು ಸಾಗಾಟ ಸೇರಿದಂತೆ ಎಂಟಕ್ಕೂ ಅಧಿಕ ಪ್ರಕರಣ ಗಳ ಆರೋಪಿ ಯಾಗಿದ್ದಾನೆ.ಹನೀಫ್ ವಿರುದ್ಧವೂ ಗಾಂಜಾ ಸಾಗಾಟ ಪ್ರಕರಣ ಗಳಿರುವುದಾಗಿ ಅಬಕಾರಿ ದಳದ ಸಿಬ್ಬಂದಿಗಳು ತಿಳಿಸಿದ್ದಾರೆ.





