May 9, 2026

ಕಾಸರಗೋಡು: ಅಂಗಡಿ ಮಾಲಕನ ಮೊಬೈಲ್ ಕಳವು ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

0
image_editor_output_image-974529782-1698905059077.jpg

ಕಾಸರಗೋಡು: ಅಂಗಡಿಯ ಮಾಲೀಕನ ಮೊಬೈಲ್ ನ್ನು ಅಂಗಡಿಗೆ ಸಾಮಾನು ತೆಗೆದುಕೊಳ್ಳಲು ಬಂದಿದ್ದ ಗ್ರಾಹಕನೊಬ್ಬ ಕಳ್ಳತನ ಮಾಡಿದ ಘಟನೆ ಕಾಸರಗೋಡಿನ ಬೇಕಲ ಠಾಣಾ ವ್ಯಾಪ್ತಿಯ ಚಿತ್ತಾರಿಯಲ್ಲಿ ನಡೆದಿದೆ.

ಚಿತ್ತಾರಿ ಚೇಟುಕುಂಡು ಎಂಬಲ್ಲಿನ ಸೂಪರ್ ಮಾರ್ಕೆಟ್ ನಲ್ಲಿ ಈ ಕಳ್ಳತನ ನಡೆದಿದ್ದು ಮೊಬೈಲ್ ಫೋನ್ ಕಳವು ಮಾಡಿ ಪರಾರಿಯಾಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಕ್ಟೋಬರ್ 18ರಂದು ರಾತ್ರಿ 10:45ರ ಸುಮಾರಿಗೆ ಸೂಪರ್ ಮಾರ್ಕೆಟ್ ಗೆ ಸಾಮಗ್ರಿ ಖರೀದಿಸುವ ನೆಪದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಈ ಕೃತ್ಯ ನಡೆಸಿದ್ದಾನೆ.

ಆತ ಕೇಳಿದ ಸಾಮಗ್ರಿಯನ್ನು ಮಾಲಕ ಹುಡುಕುತ್ತಿದ್ದಂತೆ ಮೇಜಿನ ಮೇಲೆ ಇಟ್ಟಿದ್ದ ಮೊಬೈಲ್ ಫೋನ್ ಅನ್ನು ಎಗರಿಸಿ ಆತ ಪರಾರಿಯಾಗಿದ್ದಾನೆ.

ಕಳವಾದ ಮೊಬೈಲ್ ಮೌಲ್ಯ ಸುಮಾರು 30 ಸಾವಿರ ರೂ. ಎಂದು ಹೇಳಲಾಗಿದೆ.ಈ ಬಗ್ಗೆ ಸೂಪರ್ ಮಾರ್ಕೆಟ್ ಮಾಲಕ ಮುಹಮ್ಮದ್ ರಫೀಕ್ ಬೇಕಲ ಠಾಣೆಗೆ ದೂರು ನೀಡಿದ್ದಾರೆ

Leave a Reply

Your email address will not be published. Required fields are marked *

error: Content is protected !!