ಉಡುಪಿ: BJP ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ವಂಚನೆ ಎಸಗಿರುವ ಚೈತ್ರಾಳ ವಿಚಾರಣೆ
ಉಡುಪಿ: ಬೈಂದೂರಿನ ಉದ್ಯಮಿ ಗೋಪಾಲ ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ವಂಚನೆ ಎಸಗಿರುವ ಚೈತ್ರಾಳನ್ನು ವಿಚಾರಣೆಗೆ ಕರೆದುಕೊಂಡು ಕೋಟ ಪೊಲೀಸರು ಕರೆದುಕೊಂಡು ಬಂದಿದ್ದಾರೆ.
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಚೈತ್ರಾ ವಿರುದ್ಧ ಸುಧೀನ್ ಪೂಜಾರಿ ಎಂಬವರು ದೂರು ದಾಖಲಿಸಿ 5 ಲಕ್ಷ ವಂಚನೆ ಎಸಗಿದ್ದಾರೆ ಎಂದಿದ್ದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿ ನ್ಯಾಯಾಲಯ ಸಂಚಾರಿ ಪೀಠ ಬ್ರಹ್ಮಾವರ ಇವರ ಸಮಕ್ಷಮ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮುಂದೆ ಆರೋಪಿ ಚೈತ್ರಾಳನ್ನು ಪೊಲೀಸರು ಹಾಜರುಪಡಿಸಿದ್ದಾರೆ.
ಪರಪ್ಪನ ಅಗ್ರಹಾರದಿಂದ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ಬ್ರಹ್ಮಾವರ ಸರ್ಕಲ್ ಅವರು ಆರೋಪಿತೆಯನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ಕೇಳಿದ್ದರು.
ಇದೀಗ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ವಿಚಾರಣೆ ಮುಂದುವರಿದಿದೆ. ಒಂದು ದಿನದಲ್ಲೇ ಪೊಲೀಸ್ ವಿಚಾರಣೆ ಪೂರ್ಣಗೊಳಿಸಬೇಕಾಗಿದೆ. ಇದೇ ವೇಳೆ ಮಾಧ್ಯಮವನ್ನು ಕಂಡ ಚೈತ್ರಾ ಕ್ಯಾಮೆರಾ ಕಂಡು ಟಾಟಾ ಮಾಡಿದ್ದಾರೆ.
ಆಕೆ ಮುಖದಲ್ಲಿ ಒಂದು ಚೂರೂ ತಪ್ಪಿನ ಭಾವನೆ ವ್ಯಕ್ತವಾಗಿಲ್ಲ. ಲವಲವಿಕೆಯಲ್ಲಿ ಕಂಡು ಬಂದಿದ್ದಾಳೆ. ನಾಳೆ ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ಚೈತ್ರಳನ್ನು ರವಾನೆ ಮಾಡಲಾಗುತ್ತಿದೆ.