ಮಹಿಳಾ ಎಸ್‍ಐ ಮುಂದೆಯೇ ಡ್ರ್ಯಾಗರ್ ಚಾಕು ಹಿಡಿದು ಪುಂಡಾಟ: ರೌಡಿಯ ಬಂಧನ

ತುಮಕೂರು: ಮಹಿಳಾ ಎಸ್‍ಐ ಮುಂದೆಯೇ ಡ್ರ್ಯಾಗರ್ ಹಿಡಿದು ಆತಂಕ ಮೂಡಿಸಿದ್ದ ಪುಡಿ ರೌಡಿಯೊಬ್ಬನನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ರೌಡಿಯನ್ನು ಮಧು ಅಲಿಯಾಸ್ ಮೋಜ ಎಂದು ಗುರುತಿಸಲಾಗಿದೆ. ಆರೋಪಿ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಡ್ರ್ಯಾಗರ್ ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕಿ ಮೊಬೈಲ್ ಕಳ್ಳತನ ಮಾಡಿದ್ದಾನೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಆರೋಪಿ ಬಂಧನಕ್ಕೆ ಪೊಲೀಸರು ತೆರಳಿದ್ದಾರೆ. ಈ ವೇಳೆ ಮಹಿಳಾ ಎಸ್‍ಐ ಮಂಗಳಮ್ಮ ಅವರ ಮುಂದೆಯೂ ಆರೋಪಿ ಡ್ರ್ಯಾಗರ್ ಹಿಡಿದು ಪುಂಡಾಟ ಮಾಡಿದ್ದಾನೆ.
ಸುಮಾರು ಅರ್ಧ ಗಂಟೆಗಳ ಕಾಲ ಎಸ್‍ಐ ಮುಂದೆ ಆರೋಪಿ ಡ್ರ್ಯಾಗರ್ ಹಿಡಿದು ಹುಚ್ಚಾಟ ಮಾಡಿದ್ದಾನೆ.
ಬಳಿಕ ಪೊಲೀಸರು ಹರಸಾಹಸಪಟ್ಟು ಆರೋಪಿಯನ್ನು ಹಿಡಿದಿದ್ದಾರೆ. ಅಲ್ಲದೇ ಆತನ ಜೊತೆಯಿದ್ದ ಮನೋಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.