March 20, 2026

ಟಿಶ್ಯೂ ಪೇಪರ್ ವಿಚಾರಕ್ಕೆ ಗಲಾಟೆ: ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದ ಪಾನ್ ಶಾಪ್ ಮಾಲಕ

0
image_editor_output_image989333693-1698693007153.jpg

ರಾಯಚೂರು: ಟಿಶ್ಯೂ ಪೇಪರ್ ವಿಚಾರಕ್ಕೆ ಗಲಾಟೆ ನಡೆದ ಪರಿಣಾಮ ಪಾನ್ ಶಾಪ್ ಮಾಲೀಕ ಇಬ್ಬರು ಯುವಕರಿಗೆ ಚಾಕು ಇರಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.

ವೀರೇಶ್ ಚಾಕು ಇರಿದ ಪಾನ್ ಶಾಪ್ ಮಾಲೀಕ. ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರನ್ನು ಅಟ್ಟಾಡಿಸಿ ವೀರೇಶ್ ಚಾಕು ಇರಿದಿದ್ದಾನೆ. ಗಲಾಟೆಯಲ್ಲಿ ರಮೇಶ್ ಮತ್ತು ಸತ್ತರ್ ಎಂಬವರಿಗೆ ಗಂಭೀರ ಗಾಯಗಳಾಗಿವೆ.

ರಮೇಶ್ ಹಾಗೂ ಸತ್ತರ್ ಸ್ನೇಹಿತರ ಜೊತೆ ಡಾಬಾದಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಡಾಬಾದ ಒಳಗಡೆ ಬಂದಿದ್ದ ಪಾನ್ ಶಾಪ್ ಮಾಲೀಕ ವಿರೇಶ್‌ನನ್ನು ಕಂಡು ವೇಟರ್ ಟಿಶ್ಯೂ ಪೇಪರ್ ಕೊಡು ಎಂದು ಸತ್ತರ್ ಕೇಳಿದ್ದಾನೆ.

ಇದರಿಂದ ಗಲಾಟೆ ಆರಂಭಗೊಂಡಿದ್ದು, ಈರುಳ್ಳಿ ಕತ್ತರಿಸಲು ಇಟ್ಟಿದ್ದ ಚಾಕುವಿನಿಂದ ವೀರೇಶ್ ಯುವಕರಿಗೆ ಇರಿದಿದ್ದಾನೆ

Leave a Reply

Your email address will not be published. Required fields are marked *

You may have missed

error: Content is protected !!