February 3, 2026

ಉಳ್ಳಾಲ: ನಾಪತ್ತೆಯಾಗಿದ್ದ ಬಾಲಕ ಗೋವಾದಲ್ಲಿ ಪತ್ತೆ

0
image_editor_output_image1492285762-1698683466663

ಮಂಗಳೂರು: ಉಳ್ಳಾಲದ ಮಾಸ್ತಿಕಟ್ಟೆ – ಆಝಾದ್ ನಗರದ ಹುಡುಗನೊಬ್ಬ ಕಾಣೆಯಾಗಿ ದಿನದ ಬಳಿಕ ಪತ್ತೆಯಾದ ಘಟನೆ ನಡೆದಿದೆ.

ಉಳ್ಳಾಲ ಮಾಸ್ತಿ ಕಟ್ಟೆ ಆಝಾದ್ ನಗರದ ಉಸ್ಮಾನ್ ಫಯಾಝ್ ಎಂಬವರ ಮಗ ಸ್ಥಳೀಯ ಶಾಲೆ ಯೊಂದರಲ್ಲಿ 10 ನೇ ತರಗತಿಯಲ್ಲಿ ಕಲಿಸುತ್ತಿರುವ ಮೊಹಮ್ಮದ್ ಹುಝಯ್ಫ್ ಎಂಬ 16 ವರ್ಷದ ಹುಡುಗ ನಿನ್ನೆ ಸಂಜೆಯಿಂದ (28-10-2023) ಕಾಣೆಯಾಗಿದ್ದನು.ಮನೆಯವರು, ಬಂಧುಗಳು ಆತಂಕಕ್ಕೆ ಈಡಾಗಿದ್ದರು. ಇದೀಗ ಆತ ಗೋವಾದಲ್ಲಿ ಸಿಕ್ಕಿದ ಮಾಹಿತಿಯನ್ನು ಬಾಲಕನ ಕುಟುಂಬ ಹಂಚಿಕೊಂಡಿದೆ.

ಮನೆಯಿಂದ ಹೊರ ಹೋದವನು ವಾಪಸ್ ಬರದೇ ಇರುವ ಕಾರಣ ಹುಡುಗನ ಹೆತ್ತವರು ತುಂಬಾ ಆತಂಕ, ಗಾಬರಿ ಗೊಂಡಿದ್ದರು. ಒಂದು ದಿನದ ಬಳಿಕ ಪತ್ತೆಯಾಗಿದ್ದು, ನಾಪತ್ತೆಯ ಕಾರಣ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *

error: Content is protected !!