March 18, 2026

ಬಂಟ್ವಾಳ: ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ

0
IMG-20231029-WA0027.jpg

ಬಂಟ್ವಾಳ: ಆದಿತ್ಯವಾರ ಸಂಜೆ ವೇಳೆ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡ ಘಟನೆ ಬುಡೋಳಿ ಜಂಕ್ಷನ್ ನಲ್ಲಿ ನಡೆದಿದೆ.

ಬುಡೋಳಿ ಫಾತಿಮಾ ಸ್ಟೋರ್ ಮಾಲಕ ಸಿದ್ದೀಕ್ ಅವರ ಮನೆಯಂಗಳದಲ್ಲಿ ಇರುವ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ.

ಸಿಡಿಲು ಬಡಿದ ಪರಿಣಾಮವಾಗಿ ತೆಂಗಿನ ಮರದಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಮರ ಸುಟ್ಟು ಹೋಗಿದೆ.

ಮನೆಯಂಗಳದಲ್ಲಿ ತೆಂಗಿನ ಮರ ಇದೆಯಾದರೂ ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿಸಿದ್ದಾರೆ.

ಇದರ ಪಕ್ಕದಲ್ಲೇ ಇವರಿಗೆ ಸೇರಿದ ಅಂಗಡಿ ಕೂಡ ಇದೆಯಾದರೂ ಯಾವುದೇ ಅವಘಡ ಸಂಭವಿಸಿಲ್ಲ.

ಸಿಡಿಲು ಬಡಿದ ಕೂಡಲೇ ತೆಂಗಿನಮರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದನ್ನು ಕಂಡ ರಿಕ್ಷಾ ಚಾಲಕರು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!