ಪುತ್ತೂರು: ಬಸ್ಸಿನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಓರ್ವ ಪೊಲೀಸರ ವಶಕ್ಕೆ
ಪುತ್ತೂರು: ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಅಪ್ರಾಪ್ತ ಬಾಲಕಿಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೋರ್ವರನ್ನು ಬಂಧಿಸಲಾಗಿದೆ.
ಮಂಗಳೂರಿನಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಬಸ್ಸಿನಲ್ಲಿ ಘಟನೆ ನಡೆದಿದೆ.
ಬಸ್ ಕಲ್ಲಡ್ಕ ಸಮೀಪಿಸುತ್ತಿದ್ದಂತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಾಲಕಿ ಕಿರುಚಿಕೊಂಡಿದ್ದು, ಸಹ ಪ್ರಯಾಣಿಕರು ಆರೋಪಿ ಉದಯನನ್ನು ಹಿಡಿದಿದ್ದಾರೆ. ಬಳಿಕ ಪುತ್ತೂರು ನಗರ ಪೊಲೀಸರಿಗೆ ಒಪ್ಪಿಸಲಾಯಿತು. ಪ್ರಕರಣ ದಾಖಲುಗೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.




