February 4, 2026

ಹತ್ತುವ ಭರದಲ್ಲಿ ಆಯತಪ್ಪಿ ಬಸ್ ಚಕ್ರಕ್ಕೆ ಬಿದ್ದು ವ್ಯಕ್ತಿ ಸಾವು

0
image_editor_output_image-1539369114-1698214357725.jpg

ಹುಣಸೂರು: ಬಸ್ ಹತ್ತುವ ಭರದಲ್ಲಿ ಆಯತಪ್ಪಿ ಬಿದ್ದು ಬಸ್ ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹರವೆ ಗ್ರಾಮದ ರವಿ(35) ಮೃತ ಪಟ್ಟ ದುರ್ದೈವಿ.

ಹುಣಸೂರಿನಿಂದ ಕೆಆರ್ ನಗರ ಕಡೆಗೆ ತೆರಳುತ್ತಿದ್ದ ಕೆ.ಆರ್.ನಗರ ಡಿಪೋಗೆ ಸೇರಿದ ಬಸ್‌ ಕಟ್ಟೆಮಳಲವಾಡಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಡಲು ಅನುವಾಗುತ್ತಿದ್ದಂತೆ ರವಿ ಬಸ್ ಹತ್ತಲು ಪ್ರಯತ್ನಿಸಿ ಆಯತಪ್ಪಿ ಜಾರಿ ಬಿದ್ದು ಮುಂದಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಕ್ಕನ ಮನೆಯ ಮಹಾನವಮಿ ಹಬ್ಬಕ್ಕೆ ರವಿ ತೆರಳುತ್ತಿದ್ದರು ಎನ್ನಲಾಗಿದೆ.

ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ

Leave a Reply

Your email address will not be published. Required fields are marked *

error: Content is protected !!