ಕಡಬ: ರೈಲಿನಿಂದ ಆಯತಪ್ಪಿ ಬಿದ್ದು ಯುವಕ ಸಾವು
ಕಡಬ: ಕಡಬ ತಾಲೂಕಿನ ಮರ್ದಾಳ ಬಂಟ್ರ ಗ್ರಾಮದ ನೀರಾಜೆ ನಿವಾಸಿ ಸುರೇಶ್ (34) ಎಂಬವರು ರೈಲಿನಿಂದ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.
ನೀರಾಜೆಯ ಸುರೇಶ್ ಕೇರಳದಲ್ಲಿ ಟಿಂಬರ್ ಕೆಲ ಮಾಡುತ್ತಿದ್ದು, ಗುರುವಾರ ರಾತ್ರಿ ಮನೆಮಂದಿಗೆ ಕರೆ ಮಾಡಿ ರೈಲಿನಲ್ಲಿ ಊರಿಗೆ ಬರುತ್ತಿರುವ ವಿಚಾರ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಮುಂಜಾನೆ 8 ಗಂಟೆ ಸುಮಾರಿಗೆ ಅವರ ಮನೆಯವರು ಮೊಬೈಲ್ ನಂಬರ್ ಕರೆ ಮಾಡಿದರೆ ಆಸ್ಪತ್ರೆಯ ಸಿಬ್ಬಂದಿ ಪೋನ್ ಕರೆ ಸ್ವೀಕರಿಸಿ ಸುರೇಶ್ ಮೃತಪಟ್ಟಿರುವ ವಿಚಾರ ತಿಳಿಸಿದ್ದಾರೆ.




