March 28, 2026

ಮಂಗಳೂರು: ಸಿಡಿಲು ಬಡಿದು ಮನೆಗೆ ಹಾನಿ

0
image_editor_output_image791655984-1697533429372.jpg

ಮಂಗಳೂರು: ಸಿಡಿಲು ಬಡಿದು ಮನೆಯೊಂದಕ್ಕೆ ಹಾನಿ ಉಂಟಾಗಿರುವ ಘಟನೆ ಮಂಗಳೂರು ಹೊರವಲಯದ ವಾಮಂಜೂರು ಅಮೃತ ನಗರದಲ್ಲಿ ನಡೆದಿದೆ.

ಗೋಪಾಲ ಪೂಜಾರಿ ಎಂಬುವವರ ಮನೆಗೆ ಬಡಿದ ಸಿಡಿಲು ಬಡಿದ ಪರಿಣಾಮ ಮನೆಯ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಹೋಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಸ್ವಿಚ್ ಬೋರ್ಡ್ ಹಾಗೂ ಮೀಟರ್ ಬಾಕ್ಸ್‌ಗೆ ಬೆಂಕಿ ಹಿಡಿದಿದೆ.

ಮನೆಯಲ್ಲಿ ಮಲಗಿದ್ದ ಶ್ವೇತಾ ಹಾಗೂ ಈಕೆ 5 ವರ್ಷದ ಮಗುವಿನ ಕಿವಿಗೆ ಸಿಡಿಲಿನ ಭಾರೀ ಸದ್ದಿನಿಂದ ಹಾನಿ ಉಂಟಾಗಿದೆ.

ಅವರನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿದೆ. ಘಟನೆ ಸಂದರ್ಭ ಮನೆಯಲ್ಲಿದ್ದ ನಾಲ್ವರು ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿದ್ಯುತ್ ಹಾನಿಗೆ ಒಳಗಾಗಿರುವ ಸೊತ್ತುಗಳ ನಷ್ಟದ ಅಂದಾಜು ಮಾಡಲಾಗಿಲ್ಲ.

Leave a Reply

Your email address will not be published. Required fields are marked *

error: Content is protected !!