ಇಂಗ್ಲೆಂಡ್ ಪ್ರವಾಸದಲ್ಲಿರುವ ಯು.ಟಿ.ಖಾದರ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಇಂಗ್ಲೆಂಡ್ ಘಟಕ ವತಿಯಿಂದ ಅದ್ದೂರಿ ಸ್ವಾಗತ
ಇಂಗ್ಲೆಂಡ್ ಪ್ರವಾಸದಲ್ಲಿರುವ ಕರ್ನಾಟಕದ
ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ರವರು ಬಸವರಾಜ್ ಹೊರಟ್ಟಿ ಯವರೊಂದಿಗೆ ಬಸವಣ್ಣನವರ ಪ್ರತಿಮೆಗೆ ಗೌರವ ಸಲ್ಲಿಸಲು ಆಗಮಿಸಿದ ಸಂದರ್ಭ “ಕರ್ನಾಟಕ ಕಲ್ಚರಲ್ ಫೌಂಡೇಶನ್ ” ಇಂಗ್ಲೆಂಡ್ ಘಟಕದ ಕಚೇರಿಗೆ ಭೇಟಿ ನೀಡಿದರು.
ಕೆ.ಸಿ.ಎಫ್ ವತಿಯಿಂದ ಸ್ಪೀಕರ್ ರವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು.
ಈ ಸಂದರ್ಭ ಕೆ.ಸಿ.ಎಫ್ ಅಧ್ಯಕ್ಷ ರಹೀಂ ಕ್ರಷ್ಣಾಪುರ,ಉಪಾಧ್ಯಕ್ಷ ರಹೀಂ,ಕಾರ್ಯದರ್ಶಿ ಸಾದಿಕ್, ಜತೆ ಕಾರ್ಯದರ್ಶಿ ಹನೀಫ್,ಕೋಶಾಧಿಕಾರಿ ಇರ್ಫಾನ್,
ಕಾರ್ಯಕಾರಿ ಸಮಿತಿಯ ಸದಸ್ಯ ಮರ್ಝೂಖ್ ಹಾನೆಸ್ಟ್ ವಿಟ್ಲ, ಝಿಯಾದ್ ಮಂಗಳೂರು, ಅರ್ಫಾನ್ ಮಂಗಳೂರು, ಮುಖ್ತಾರ್ ವಿಟ್ಲ, ರಿಝ್ವಾನ್ ಮುಂತಾದವರು ಉಪಸ್ಥಿತರಿದ್ದರು.


