ಕಾಂಗ್ರೆಸ್ ಮುಖಂಡರಿಂದ ಕಿರುಕುಳ: ಸಂಘಪರಿವಾರದ ಕಾರ್ಯಕರ್ತ ಆತ್ಮಹತ್ಯೆ
ಕೊಪ್ಪಳ: ಕಿರುಕುಳಕ್ಕೆ ಬೇಸತ್ತು ಗುತ್ತಿಗೆದಾರ ಸಂಘಪರಿವಾರದ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ನಗರದ ಬಿ.ಟಿ. ಪಾಟೀಲ್ ನಗರದ ರಾಜೀವ ಬಗಾಡೆ (50) ಮೃತ ಗುತ್ತಿಗೆದಾರ. ಕಳೆದ ನಾಲ್ಕು ದಿನದ ಹಿಂದೆ ವಿಷ ಸೇವಿಸಿದ್ದ ರಾಜೀವ ಬಗಾಡೆಗೆ ಕೊಪ್ಪಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಗಡಾದ, ನಗರಸಭೆ ಸದಸ್ಯ ಚೆನ್ನಪ್ಪ ಕೋಟ್ಯಾಳ್ ಸೇರಿ 7 ಜನರ ಹೆಸರನ್ನು ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆ ಡೆತ್ ನೋಟ್‌ನಲ್ಲಿ ಗುತ್ತಿಗೆದಾರ ದೊಡ್ಡಪ್ಪ ಹರಗುರಿ, ನಗರಸಭೆ ಸದಸ್ಯ ಚನ್ನಪ್ಪಕೋಟ್ಯಾಳ, ನಗರಸಭೆ ಮಾಜಿ ಸದಸ್ಯ ಡಾ.ಉಪೇಂದ್ರ ರಾಜು, ಮುನಿ ವಿಜಯಕುಮಾರ, ರಫಿ, ಮಲ್ಲಿಕಾರ್ಜುನ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಾಗಿದೆ




