ಪ್ರತಿ ವಾಣಿಜ್ಯ ಸಿಲಿಂಡರ್‌ಗೆ ಎಲ್‌ಪಿಜಿ ಬೆಲೆ 103.50 ರೂ. ಹೆಚ್ಚಳ

ನವದೆಹಲಿ: ವಾಣಿಜ್ಯ ಸಿಲಿಂಡರ್‌ಗಳ ಎಲ್‌ಪಿಜಿ ಬೆಲೆಯನ್ನು ಬುಧವಾರ 103.50 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇಂದಿನಿಂದಲೇ ಬೆಲೆ ಏರಿಕೆ ಜಾರಿಗೆ ಬರಲಿದೆ. ಅದೇ ಸಮಯದಲ್ಲಿ, ಗೃಹಬಳಕೆಯ ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.
ಜನಸಾಮಾನ್ಯರಿಗೆ ದೊಡ್ಡ ಶಾಕ್ ಆಗಿದ್ದು, ಡಿಸೆಂಬರ್ ಮೊದಲ ದಿನವೇ ಎಲ್‌ಪಿಜಿ ಬೆಲೆ ಏರಿಕೆಯಾಗಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಇಂದಿನಿಂದ ಜಾರಿಗೆ ಬರುವಂತೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ.
ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಇಂದಿನಿಂದ 2,104 ರೂ ಆಗಲಿದೆ. ಮೊದಲು 2000.50 ರೂ ಇತ್ತು. ಕೋಲ್ಕತ್ತಾದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 101 ರೂಪಾಯಿ ಏರಿಕೆಯಾಗಿ 2,174.5 ರೂಪಾಯಿಗೆ ತಲುಪಿದೆ. ಮೊದಲು ಇದರ ಬೆಲೆ 2073.5 ರೂ. ಮುಂಬೈನಲ್ಲಿ ವಾಣಿಜ್ಯ ಗ್ಯಾಸ್ ಬೆಲೆ 2,051 ರೂ.ಗೆ ಏರಿಕೆಯಾಗಿದೆ. ಮೊದಲು ಬೆಲೆ 1,950 ರೂ. ಇಲ್ಲಿ 101 ರೂಪಾಯಿ ಏರಿಕೆಯಾಗಿದೆ. ಅದೇ ಸಮಯದಲ್ಲಿ ಚೆನ್ನೈನಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,234.50 ರೂ.ಗೆ ಏರಿದೆ. ಈ ಹಿಂದೆ ಬೆಲೆ 2,133 ರೂ.