March 18, 2026

ವಿಟ್ಲ: ಉಚಿತ ವೈದ್ಯಕೀಯ ಮತ್ತು ದಂತ ತಪಾಸಣಾ ಶಿಬಿರ

0
IMG-20231009-WA0002.jpg


ವಿಟ್ಲ: ವಿಟ್ಲ ಐಎಂಸಿ ಸರಕಾರಿ ಸರಕಾರಿ ತರಬೇತಿ ಸಂಸ್ಥೆ, ಮತ್ತು ಸುರತ್ಕಲ್ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕೆ.ಎಂಸಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ವೈದ್ಯಕೀಯ ಮತ್ತು ದಂತ ತಪಾಸಣಾ ಶಿಬಿರ ವಿಟ್ಲ ಸಿ ಸರಕಾರಿ ಸರಕಾರಿ ತರಬೇತಿ ಸಂಸ್ಥೆಯಲ್ಲಿ ಸೋಮವಾರ ನಡೆಯಿತು.


ಕಾರ್ಯಕ್ರಮವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿ ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳ್ಯುತ್ತಮ ಭವಿಷ್ಯಕ್ಕೆ ಪೂರ್ವಕವಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ನಿರ್ಧರಿಸುವ ಸಮಯ ಇದಾಗಿದ್ದು, ಪ್ರತಿಯೊಬ್ಬರು ಸದ್ಬಳಕೆ ಮಾಡಬೇಕು. ವಿವಿಧ ಇಲಾಖೆಗಳಿಗೆ ತರಬೇತಿ ನೀಡುವ ಮೂಲಕ ಅವರಿಗೆ ಉದ್ಯೋಗ ಕೊಡಿಸುವ ಕಾರ್ಯ ನಡೆಯುತ್ತಿದೆ. ಯುವಕರು ಎಲ್ಲಾ ವಿಭಾಗದಲ್ಲಿ ಮುಂದೆ ಬರಬೇಕು. ಹೆತ್ತವರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕನಸು ಇಟ್ಟಿರುತ್ತಾರೆ ಅದನ್ನು ಕನಸು ನನಸು ಮಾಡುವ ಜವಾಬ್ದಾರಿ ಮಕ್ಕಳ ಮೇಲಿದೆ. ಜೀವನದಲ್ಲಿ ಶಿಸ್ತು ಅಳವಡಿಸಬೇಕು. ಗುರಿ ಹೊಂದಬೇಕು, ಶ್ರಮ, ಗುರಿ ಇದ್ದಾಗ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.


ಗುರು ಚಾರಿಟೇಬಲ್ ಟ್ರಸ್ಟ್‌ನ ಸದಸ್ಯ ಪ್ರೇಮನಾಥ ಕರ್ಕೆರ, ಕೆಎಂಸಿಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರ್ಬರ್ಟ್, ಪಟ್ಟಣ ಪಂಚಾಯಿತಿ ವಿಕೆಎಂ ಅಶ್ರಪ್, ಸಂಸ್ಥೆಯ ಸದಸ್ಯರಾದ ಸಿ.ಎಸ್ ಸಿಕ್ವೇರಾ, ಗ್ರಾಮ ಪಂಚಾಯಿತಿ ಸದಸ್ಯರಾದ ರಮಾನಾಥ ವಿಟ್ಲ, ಶ್ರೀನಿವಾಸ್ ಶೆಟ್ಟಿ ಕೊಲ್ಯ, ಪ್ರಾಂಶುಪಾಲ ಹರೀಶ್ ಮೊದಲಾದವರು ಉಪಸ್ಥಿತರಿದ್ದರು. ಕಿರಿಯ ತರಬೇತಿ ಅಧಿಕಾರಿ ಜೋಯಿಲಿನ್ ಕ್ರಾಸ್ತಾ, ನಿರೂಪಿಸಿದರು. ಸುಕನ್ಯಾ ರಾವ್ ಸ್ವಾಗತಿಸಿದರು. ಅಕ್ಷತಾ ವಂದಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!