March 18, 2026

ವಿಟ್ಲ: ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶರದೃತು ಸಂಸ್ಕಾರ ಶಿಬಿರ:
ಸಂಸ್ಕಾರ ಶಿಬಿರಗಳಿಂದ ಪ್ರತಿಭೆಗಳ ಅನಾರವಣ ಎಂದ ಒಡಿಯೂರು ಶ್ರೀ

0
IMG-20231009-WA0003.jpg



ವಿಟ್ಲ: ಉತ್ಸಾಹ ಮತ್ತು ಉಲ್ಲಾಸ ಇವೆರಡೂ ಬದುಕಿನಲ್ಲಿ ಬೇಕು. ಆಗ ನಮ್ಮಲ್ಲಿ ಖಿನ್ನತೆಗೆ, ಚಿಂತೆಗೆ ಅವಕಾಶವಿರುವುದಿಲ್ಲ. ನಮ್ಮನ್ನು ನಾವು ಸದ್ವಿಚಾರಗಳಲ್ಲಿ ತೊಡಗಿಸುವ ಜೊತೆಗೆ ನಿತ್ಯ ಚಟುವಟಿಕೆಗಳಲ್ಲಿ ನಿರತರಾದಾಗ ಪ್ರಬುದ್ಧರಾಗುತ್ತೇವೆ. ಸಂಸ್ಕಾರದಿಂದ ಜೀವನರಥಕ್ಕೊಂದು ಪಥ ದೊರೆಯುತ್ತದೆ. ನಮ್ಮ ಮಾತು ಮನಸ್ಸು ಜೊತೆಯಾಗಿರಬೇಕು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ೬ನೇ ತರಗತಿಯಿಂದ ೧೦ನೇ ತರಗತಿಯವರೆಗಿನ ಮಕ್ಕಳಿಗೆ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠವು ಆಯೋಜಿಸಿದ ಶರದೃತು ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಅಶೀರ್ವಚನ ನೀಡಿದರು.
ಈ ಸಂದರ್ಭ ಸಾಧ್ವಿ ಶ್ರೀ ಮಾತಾನಂದಮಯೀ ಸಾನ್ನಿಧ್ಯ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶಿವಗಿರಿ ಕಲ್ಲಡ್ಕ, ಮೈತ್ರೇಯಿ ಗುರುಕುಲದ ಭಗಿನಿ ಶ್ರೀಮತಿ ಭಟ್, ಶಾಲಾ ಮುಖ್ಯೋಪಾಧ್ಯಾಯ ರೇಣುಕಾ ಎಸ್. ರೈ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ವಿದ್ಯಾ, ಪಲ್ಲವಿ, ಶ್ರೀರಕ್ಷಾ, ಪೂಜಾಲಕ್ಷ್ಮೀ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಗುರುಕುಲದ ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ದಿವ್ಯ ವಂದಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!