March 18, 2026

ರಾಹುಲ್‌ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್‌: ಬಿಜೆಪಿ ಟ್ವಿಟರ್ ಖಾತೆ ವಿರುದ್ಧ ಕಾಂಗ್ರೆಸ್‌ ದೂರು

0
IMG-20231006-WA0002.jpg



ಬೆಂಗಳೂರು: ರಾಹುಲ್‌ಗಾಂಧಿ ಅವರ ಭಾವಚಿತ್ರವನ್ನು ಹಾಕಿ ಅವರ ವಿರುದ್ಧ ಅಪಪ್ರಚಾರವನ್ನು ಮಾಡಿರುವ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸಿ, ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೈ.ಪುಟ್ಟರಾಜು ದೂರು ದಾಖಲಿಸಿದ್ದಾರೆ.

ಬಿಜೆಪಿ ಟ್ವಿಟರ್ ಖಾತೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದ್ದು, ಧರ್ಮವಿರೋಧಿ, ಶ್ರೀರಾಮನ ವಿರೋಧಿ, ಆಧುನಿಕ ರಾವಣ ಎಂಬೆಲ್ಲಾ ಪದಗಳನ್ನು ಬಳಸಿ ಸುಳ್ಳು ಮಾಹಿತಿಯನ್ನು ಹರಡಲಾಗುತ್ತಿದ್ದು, ಇದು ರಾಹುಲ್‌ಗಾಂಧಿ ಅವರ ಅಭಿಮಾನಿಗಳಿಗೆ ಹಾಗೂ ಪಕ್ಷಕ್ಕೆ ನೋವುಂಟು ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು, ರಾಹುಲ್‌ಗಾಂಧಿ ಅಭಿಮಾನಿಗಳನ್ನು ಕೆರಳಿಸುವಂತೆ ಪ್ರಚೋದನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!