ನದಿಗೆ ಹಾರಿ ಗುತ್ತಿಗೆದಾರ ಸತ್ತಾರ್ ಆತ್ಮಹತ್ಯೆ
ಹಾಸನ: ಹೇಮಾವತಿ ನದಿಗೆ ಹಾರಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ವರದಿಯಾಗಿದೆ. ಸ್ಥಳೀಯ ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಸತ್ತಾರ್ (79) ಆತ್ಮಹತ್ಯೆ ಮಾಡಿಕೊಂಡಿರುವವರು ಎಂದು ಗುರುತಿಸಲಾಗಿದೆ.
ವೈಯಕ್ತಿಕ ಸಮಸ್ಯೆ ಹಾಗೂ ಸಾಲ ಕೊಟ್ಟಿದ್ದ ಲಕ್ಷಾಂತರ ರೂ.ಹಣ ವಾಪಸ್ ಬಾರದೇ ಇದ್ದುದರಿಂದ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ.




