ವಿಟ್ಲದಲ್ಲಿ AYZAL AYSHA ಫ್ಯಾಷನ್ಸ್ ಶುಭಾರಂಭ
ವಿಟ್ಲ: AYZAL AYSHA ಫ್ಯಾಷನ್ಸ್ ನ ಉದ್ಘಾಟನಾ ಸಮಾರಂಭ ಅ.2ರಂದು ಸೋಮವಾರ ವಿಟ್ಲ ಖಾಸಗಿ ಬಸ್ ನಿಲ್ದಾಣದ ಪಂಚಾಯತ್ ಕಟ್ಟಡದಲ್ಲಿ ನಡೆಯಿತು.


ಬಂಟ್ವಾಳದ ಜಂಇಯ್ಯತುಲ್ ಫಲಾಹ್ ನ ಅಧ್ಯಕ್ಷರಾದ ರಶೀದ್ ವಿಟ್ಲ ಅವರು AYZAL AYSHA ಫ್ಯಾಷನ್ಸ್ ಗೆ ಚಾಲನೆ ನೀಡಿದರು.
AYZAL AYSHA ಫ್ಯಾಷನ್ಸ್ ನ ಪ್ರಮುಖರಾದ ಡಾ. ಮೂಸ ಯೂಸುಫ್ ಕುಂಬ್ಳೆ ಅವರು ಗಣ್ಯರನ್ನು ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಸದಸ್ಯ ಅರುಣ್ ವಿಟ್ಲ, ವಿಕೆಎಂ ಅಶ್ರಪ್, ಎಸ್ ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಮರ್ಚೆಂಟ್ಸ್ ಯೂನಿಯನ್ ವಿಟ್ಲದ ಕಾರ್ಯದರ್ಶಿ ಕ್ಲಿಫ್ರೆಡ್ ವೆಗಾಸ್, ಉಬೈದ್ ವಿಟ್ಲ ಬಝಾರ್, ಮತ್ತಿತರರು ಉಪಸ್ಥಿತರಿದ್ದರು.
AYZAL AYSHA ಫ್ಯಾಷನ್ಸ್ ನಲ್ಲಿ ಲೇಡೀಸ್ ವೇರ್, ಕಿಡ್ಸ್ ವೇರ್, ಜೆಂಟ್ಸ್ ವೇರ್ ಲಭ್ಯವಿದೆ.




