ವಿಟ್ಲ: ಡಿ’ಗ್ರೂಪ್ ವತಿಯಿಂದ ಕಬಡ್ಡಿ ಜೆರ್ಸಿ ಬಿಡುಗಡೆ ಮತ್ತು ಸನ್ಮಾನ
ವಿಟ್ಲ: ಡಿ’ ಗ್ರೂಪ್ (ರಿ) ವಿಟ್ಲ ವತಿಯಿಂದ ಕಬಡ್ಡಿ ಜೆರ್ಸಿ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮ ಗೌರವಾಧ್ಯಕ್ಷ ಅಝೀಝ್ ಸನ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಮಾಪಿಳ್ಳೆ ಪಾಟ್ ಹಾಡುಗಾರ ಹೊನ್ನಪ್ಪ ಮೇಗಿನಪೇಟೆ ಇವರನ್ನು ಸನ್ಮಾನಿಸಲಾಯಿತು.
ವಿ.ಎಚ್.ಅಶ್ರಫ್, ಶಾಕಿರ್ ಅಳಕೆಮಜಲು, ಬಶೀರ್ ಬೊಬ್ಬೆಕೇರಿ, ಜಾಫರ್ ಖಾನ್, ಮಂಗಳೂರು ಯುನಿವರ್ಸಿಟಿ ಕಬಡ್ಡಿ ಆಟಗಾರ ವಿಶ್ವರಾಜ್, ಕೇಲೋ ಇಂಡಿಯಾ ಕಬಡ್ಡಿ ಆಟಗಾರ ರಶೀದ್ ಬನಾರಿ, ಹಂಝ ವಿಟ್ಲ, ತ್ವೈಬಾ ಆಶ್ರಫ್, ಅಬ್ದುಲ್ ಸಮದ್ ಮೇಗಿನಪೇಟೆ, ಇರ್ಷಾದ್ ಸೆಲೆಕ್ಟ್, ಸೈಝಾದ್, ರಾಝಿಕ್ ಕಿಸ್ವ, ಶಿಹಾಬ್ ತ್ವೈಬಾ ಮುಂತಾದವರು ಉಪಸ್ಥಿತರಿದ್ದರು.
ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ನಿರೂಪಿಸಿದರು.





