ವಿಟ್ಲ: ಬೊಬ್ಬೆಕೇರಿ ಮುನೀರುಲ್ ಇಸ್ಲಾಂ ಮದರಸದಲ್ಲಿ ಮಿಲಾದ್ ಫೆಸ್ಟ್
ವಿಟ್ಲ ; ವಿಟ್ಲ – ಬೊಬ್ಬೆಕೇರಿ ಮುನೀರುಲ್ ಇಸ್ಲಾಂ ಮದರಸದಲ್ಲಿ ಮಿಲಾದ್ ಫೆಸ್ಟ್ ಅಧ್ಯಕ್ಷ ಅಬ್ದುಲ್ ಖಾದರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಮಹಮ್ಮದ್ ನಸೀಹ್ ದಾರಿಮಿ ದುವಾ ನೆರವೇರಿಸಿದರು.
ಈ ಸಂದರ್ಭ ಮದರಸ ವಿದ್ಯಾರ್ಥಿಗಳಿಂದ ಭಾಷಣ ,ಹಾಡು ಮುಂತಾದ ಸ್ಪರ್ಧೆಗಳು,ಬುರ್ಧಾ ಮಜ್ಲಿಸ್ ನಡೆಯಿತು.
ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಶೀತಲ್ ಇಕ್ಬಾಲ್, ಕಾರ್ಯದರ್ಶಿ ಹಮೀದ್ ಬದ್ರಿಯಾ, ಕೋಶಾಧಿಕಾರಿ ಶರೀಫ್ ಮೇಗಿನಪೇಟೆ, ಎಂ.ಪಿ.ಶಮೀರ್ ಪಳಿಕೆ, ಬಶೀರ್ ಬೊಬ್ಬೆಕೇರಿ, ಕೋಶಾದಿಕಾರಿ ಜಲಾಲ್ ಬೊಬ್ಬೆಕೇರಿ, ಕಾರ್ಯದರ್ಶಿ ಇಮ್ತಿಯಾಝ್ ಅಹಮದ್, ಮುಂತಾದವರು ಉಪಸ್ಥಿತರಿದ್ದರು.
ಅಬೂಬಕರ್ ಅನಿಲಕಟ್ಟೆ ಹಾಗೂ ಮಹಮ್ಮದ್ ನಿಝಾಮ್ ತೀರ್ಪಗಾರರಾಗಿದ್ದರು.
ಮುಅಲ್ಲಿಂ ಮಹಮ್ಮದ್ ಹನೀಫ್ ಲತೀಫಿ ಸ್ವಾಗತಿಸಿದರು.
ರಹೀಮಾನ್ ಬೊಬ್ಬೆಕೇರಿ ನಿರೂಪಿಸಿದರು.




