September 25, 2026

ಮಂಗಳೂರು: ಆನ್ ಲೈನ್ ವಂಚನೆ: ಕ್ರೆಡಿಟ್‌ ಕಾರ್ಡ್‌ನಿಂದ 1.55 ಲ.ರೂ. ವರ್ಗಾವಣೆ
 

0
1695051431158-1.jpg


ಮಂಗಳೂರು: ವ್ಯಕ್ತಿಯೊಬ್ಬರ ಕ್ರೆಡಿಟ್‌ ಕಾರ್ಡ್‌ನಿಂದ 1.55 ಲ.ರೂ.ಗಳನ್ನು ಅನಧಿಕೃತವಾಗಿ ವರ್ಗಾಯಿಸಿ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ದೂರುದಾರರು ಐಸಿಐಸಿಐ ಕ್ರೆಡಿಟ್‌ ಕಾರ್ಡ್‌ ಹೊಂದಿದ್ದು, ಅವರ ಮೊಬೈಲ್‌ಗೆ ಸೆ. 10ರಂದು ಹಲವು ಒಟಿಪಿಗಳ ಸಂದೇಶ ಬಂದಿದ್ದವು. ಅಲ್ಲದೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು.

ಅವರು ಯಾವುದೇ ಕರೆ ಸ್ವೀಕರಿಸದೆ ಕೂಡಲೇ ತಮ್ಮ ಮೊಬೈಲ್‌ನಿಂದ ಐಸಿಐಸಿಐ ಆ್ಯಪ್‌ ತೆರೆದು ಕ್ರೆಡಿಟ್‌ ಕಾರ್ಡ್‌ ಬ್ಲಾಕ್‌ ಮಾಡಿದ್ದರು. ಅಲ್ಲದೆ ಐಸಿಐಸಿಐ ಕ್ರೆಡಿಟ್‌ ಕಾರ್ಡ್‌ನ ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ಕಾರ್ಡ್‌ ಬ್ಲಾಕ್‌ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದರು.

ಕಾರ್ಡ್‌ ಬ್ಲಾಕ್‌ ಆಗಿರುವ ಬಗ್ಗೆ ಈ ಮೇಲ್‌ ಕೂಡ ಕಸ್ಟಮರ್‌ ಕೇರ್‌ನವರಿಂದ ಬಂದಿತ್ತು. ಮರುದಿನ ರಾತ್ರಿ ಆ್ಯಪ್‌ ಮೂಲಕ ಕ್ರೆಡಿಟ್‌ ಕಾರ್ಡ್‌ನ ಸ್ಟೇಟಸ್‌ ನೋಡಿದಾಗ 1,60,401 ರೂ. ಔಟ್‌ಸ್ಟಾಂಡಿಂಗ್‌ ಇರುವುದಾಗಿ ತೋರಿಸಿತು. ಐಸಿಐಸಿಐ ಕ್ರೆಡಿಟ್ ಕಾರ್ಡ್ ನ ಕಸ್ಟಮರ್ ಕೇರ್ ಕರೆ ಮಾಡಿ ವಿಚಾರಿಸಿದಾಗ ಅನಧಿಕೃತ ಹಣ ವರ್ಗಾವಣೆ ಆದ ಬಗ್ಗೆ ದೂರು ಸ್ವೀಕರಿಸಿಕೊಂಡು ಸ್ವೀಕೃತಿ ನಂಬರ್ ಅನ್ನು ಮೌಖಿಕವಾಗಿ ನೀಡಿರುತ್ತಾರೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಐಸಿಐಸಿಐ ಕ್ರೆಡಿಟ್ ಕಾರ್ಡ್ ನಿಂದ ಅನಧಿಕೃತವಾಗಿ ಒಟ್ಟು 1,55,000/- ರೂಗಳನ್ನು ಆನ್ ಲೈನ್ ಮುಖಾಂತರ ಮೋಸದಿಂದ ವರ್ಗಾಯಿಸಿಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 

Leave a Reply

Your email address will not be published. Required fields are marked *

You may have missed

error: Content is protected !!