September 25, 2026

ಪೊಲೀಸ್‌ ಕಾನ್‌ಸ್ಟೇಬಲ್ ಆತ್ಮಹತ್ಯೆ

0
image_editor_output_image821964281-1696334541413.jpg

ಶಿವಮೊಗ್ಗ: ಸಂಚಾರ ವಿಭಾಗದ ಪೊಲೀಸ್‌ ಕಾನ್‌ಸ್ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದ ವಿನೋಬಾ ನಗರದಲ್ಲಿ ವರದಿಯಾಗಿದೆ.

ಆತ್ಮಹತ್ಯೆ ಗೆ ಶರಣಾದವರನ್ನು ಜಯಪ್ಪ ಉಪ್ಪಾರ್ (43) ಎಂದು ಗುರುತಿಸಲಾಗಿದೆ. ಜಯಪ್ಪ ಉಪ್ಪಾರ್ ಅವರು ಶಿವಮೊಗ್ಗ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಜಯಪ್ಪ ಅವರ ಪತ್ನಿ ಮೆದುಳು ಜ್ವರಕ್ಕೆ ಒಳಗಾಗಿ ಮೃತಪಟ್ಟಿದ್ದರು. ಇದರಿಂದ ಉಪ್ಪಾರ್ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

 

ಇದೇ ಕಾರಣಕ್ಕೆ ಉಪ್ಪಾರ್ ಅವರು ಕರ್ತವ್ಯ ಮುಗಿಸಿಕೊಂಡು ಬಂದು ತೊಟ್ಟಿದ್ದ ಸಮವಸ್ತ್ರದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿ ವಿನೋಬ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!