March 19, 2026

ಮಧೂರು ಪಟ್ಲದ ಶಾನ್ ವಾಜ್ ಕೊಲೆ ಪ್ರಕರಣದ ಆರೋಪಿಯ ಕೊಲೆ

0
image_editor_output_image1647635873-1696236262997.jpg

ಕಾಸರಗೋಡು: ಕುಂಬಳೆ ದೂರದ ಮೈದಾನ ಸಮೀಪದ ಪೊದೆಯೊಂದರಲ್ಲಿ ಕೊಲೆ ಪ್ರಕರಣದ ಆರೋಪಿಯ ಮೃತ ದೇಹ ಪತ್ತೆಯಾಗಿದೆ. ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಅಬ್ದುಲ್ ರಶೀದ್ ಮೃತ ದೇಹ ಪತ್ತೆಯಾಗಿದೆ. ಈತ ಮಧೂರು ಪಟ್ಲದ ಶಾನ್ ವಾಜ್ ( 24) ಕೊಲೆ ಪ್ರಕರಣದ ಆರೋಪಿ.

ಇಂದು ಬೆಳಿಗ್ಗೆ ಮೈದಾನಕ್ಕೆ ಆಟವಾಡಲು ಬಂದಿದ್ದ ಮಕ್ಕಳು ಮೈದಾನದಲ್ಲಿ ರಕ್ತದ ಕಲೆಗಳನ್ನು ಕಂಡು ಪರಿಸರ ವಾಸಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ನಡೆದ ಶೋಧ ದಿಂದ ಮೈದಾನ ದಿಂದ 50 ಮೀಟರ್ ದೂರದ ಪೊದೆಯೊಂದರಲ್ಲಿ ಮೃತದೇಹ ಪತ್ತೆಯಾಗಿದೆ.

ಕುಂಬಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!