March 23, 2026

ಬಂಟ್ವಾಳ: ಕಲ್ಲಡ್ಕ ಸರ್ವೀಸ್ ರಸ್ತೆಯ ಚರಂಡಿಗೆ ಬಿದ್ದ ಘನಗಾತ್ರದ ಲಾರಿ: ಸಂಚಾರಕ್ಕೆ ಅಡಚಣೆ
 

0
image_editor_output_image1820658343-1696172421266.jpg


ಬಂಟ್ವಾಳ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕಲ್ಲಡ್ಕ ಸರ್ವೀಸ್ ರಸ್ತೆಯ ಚರಂಡಿಗೆ ಘನಗಾತ್ರದ ಲಾರಿಯೊಂದು ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಅ.1 ರಂದು ಆದಿತ್ಯವಾರ ಬೆಳಿಗ್ಗೆ ವೇಳೆ ನಡೆದಿದೆ.

ಕಲ್ಲಡ್ಕದ ಪೇಟೆಯಿಂದ ಸ್ವಲ್ಪ ಮುಂದೆ ಪೂರ್ಲಿಪಾಡಿ ನಡುವೆ ಸರ್ವೀಸ್ ರಸ್ತೆಯ ಬದಿಯಲ್ಲಿ ಮಳೆ ನೀರು ಹರಿದು ಹೋಗಲು ತಾತ್ಕಾಲಿಕವಾಗಿ ಮಾಡಲಾದ ಚರಂಡಿಗೆ ಲಾರಿ ಬಿದ್ದಿದೆ. ಇಲ್ಲಿ ರಸ್ತೆ ಮತ್ತು ಚರಂಡಿ ಎರಡು ಒಂದೇ ರೀತಿಯಲ್ಲಿ ಸಮನಾಗಿದೆ. ಹಾಗಾಗಿ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿ ರಸ್ತೆಯ ಬದಿಗೆ ಸರಿದರೆ ವಾಹನಗಳು ಹೂತು ಹೋಗುವುದು ಗ್ಯಾರಂಟಿ.

ಕಲ್ಲಡ್ಕ ಪೇಟೆ ಉಳಿಸುವ ಸಲುವಾಗಿ ಇಲ್ಲಿ ಪ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದ್ದು, ಪ್ಲೈ ಓವರ್ ನಿರ್ಮಾಣ ಮಾಡುವ ಸಂದರ್ಭ ಎರಡು ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಸರ್ವೀಸ್ ರಸ್ತೆಯನ್ನು ಪರಿಪೂರ್ಣ ರೀತಿಯಲ್ಲಿ ಮಾಡದೆ ಜನರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂಬುದು ಸಾರ್ವಜನಿಕ ಆರೋಪ.

ಇನ್ನು ಕನಿಷ್ಟ ಡಾಮರೀಕರಣ ಮಾಡಿದರೆ ಇವರ ಪ್ಲೈ ಓವರ್ ಕಾಮಗಾರಿ ಮುಗಿಯುವವರೆಗೆ ಸಂಚಾರ ಮಾಡಬಹುದಿತ್ತು.ಇದೀಗ ಕೆಸರು ಮಿಶ್ರಿತ ಅವೈಜ್ಞಾನಿಕ ರೀತಿಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಒಂದುಕಡೆಯಾದರೆ, ಇನ್ನೊಂದು ಕಡೆ ವಾಹನಗಳ ಅಪಘಾತಗಳು ನಿತ್ಯ ಸಂಭವಿಸುತ್ತಿದ್ದು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!