ವಿಟ್ಲ ,ಕೇಂದ್ರ ಜುಮಾ ಮಸೀದಿ, ಈದ್ ಮಿಲಾದ್

ವಿಟ್ಲ ; ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ,ರವರ ಜನ್ಮದಿನಾಚರಣೆ ಈದ್ ಮಿಲಾದ್ ನ್ನು ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಮಸೀದಿ ಅಧ್ಯಕ್ಷ ಶೀತಲ್ ಇಕ್ಬಾಲ್ ಧ್ವಜಾರೋಹಣ ಮಾಡಿದರು.
ಈ ಸಂದರ್ಭ ಮದರಸ ವಿಧ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು ,ಬುರ್ದಾ ಮಜ್ಲಿಸ್ ರಸಪ್ರಶ್ನೆ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ,ಬಹುಮಾನ ವಿತರಣೆ ನಡೆಯಿತು.
ಖತೀಬ್ ಮಹಮ್ಮದ್ ನಸೀಹ್ ದಾರಿಮಿ ದುವಾದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಸೀದಿಯ ಕಾರ್ಯದರ್ಶಿ ಹಮೀದ್ ಬದ್ರಿಯಾ, ಜತೆ ಕಾರ್ಯದರ್ಶಿ ಹಮೀದ್ ಕುರುಂಬಳ,ಕೋಶಾದಿಕಾರಿ ಶರೀಫ್ ಮೇಗಿನಪೇಟೆ, ಯೂತ್ ವಿಂಗ್ ಅಧ್ಯಕ್ಷ ರಫೀಕ್ ಪೊನ್ನೋಟು, ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಝುಬೈರ್ ಮಾಸ್ಟರ್, ವಿ.ಎ.ರಶೀದ್, ಮಹಮ್ಮದ್ ಗಮಿ,ಹಮೀದ್ ಪೊನ್ನೋಟು, ಅಬೂಬಕರ್ ಅನಿಲಕಟ್ಟೆ, ಸದರ್ ಮಹಮ್ಮದ್ ಅಜ್ಮಲ್ ಫೈಝಿ,ಅಬ್ದುಲ್ ಖಾದರ್, ಮುಸ್ಲಿಯಾರ್,ಹಕೀಂ ಅರ್ಷದಿ,, ಆಶ್ರಫ್ ಕುರುಂಬಳ, ಯೂಸುಫ್ ಗಮಿ,ಮನ್ಸೂರ್ ಹಾನೆಸ್ಟ್ ಹಾಗೂ ಮದರಸ ಅಧ್ಯಾಪಕರು ಉಪಸ್ಥಿತರಿದ್ದರು.