ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ 68ನೇ ವಾರ್ಷಿಕ ಮಹಾ ಸಭೆ
ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ 2022-23ನೇ ಸಾಲಿನಲ್ಲಿ ಠೇವಣಾತಿಯಲ್ಲಿ ಶೇ.4.46 ಏರಿಕೆಯಾಗಿದ್ದು, 120.19ಕೋಟಿ ಠೇವಣಾತಿಯನ್ನು ಹೊಂದಿದೆ. ಪ್ರಧಾನ ಕಛೇರಿಯಲ್ಲಿ ಪ್ರಸಕ್ತ ಸಾಲಿನಲ್ಲಿ 10.25 ಟನ್ ರಬ್ಬರ್ ಖರೀದಿಸಲಾಗಿದೆ. 6.78 ಲಕ್ಷವನ್ನು ಸಮಾಮುಖಿ ಸೇವೆಗಳಿಗೆ ಬಳಸಿಕೊಳ್ಳಲಾಗಿದೆ. 32 ಖಾಯಂ ಸಿಬ್ಬಂದಿಗಳನ್ನು ಹೊಂದಿದ್ದು, ಪ್ರಧಾನ ಕಛೇರಿ ಹಾಗೂ ಕಲ್ಲಡ್ಕ ಶಾಖೆಯಲ್ಲಿ ಕೃಷಿಕರಿಗೆ ಉತ್ಪತ್ತಿ ಈಡಿನ ಸಾಲವನ್ನು ನೀಡಲಾಗುತ್ತಿದೆ ಎಂದು ನಿಯಮಿತದ ಅಧ್ಯಕ್ಷ ಎಚ್. ಜಗನ್ನಾಥ ಸಾಲಿಯಾನ್ ಹೇಳಿದರು.
ಅವರು ಭಾನುವಾರ ಅಕ್ಷಯ ಸಮುದಾಯ ಭವನದಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ 68ನೇ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಕೃಷ್ಣಮುರಳಿ ಶ್ಯಾಮ್ ಕೆ. ಮಾತನಾಡಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 615.74ಕೋಟಿ ರೂಪಾಯಿಗಳ ವ್ಯವಹಾರವನ್ನು ನಡೆಸಿ 2.61ಕೋಟಿ ಲಾಭಗಳಿಸಿದೆ. 7525ಸದಸ್ಯರಿದ್ದು, 2.42 ಕೋಟಿ ಪಾಲು ಬಂಡವಾಳವನ್ನು ಹೊಂದಿದೆ. ಆಡಿಟ್ ವರ್ಗೀಕರಣದಲ್ಲಿ ಕಳೆದ ಕೆಲವು ವರ್ಷಗಳಿಂದ ಸತತವಾಗಿ ಎ ತರಗತಿಯಲ್ಲಿ ಮುನ್ನಡೆಯುತ್ತಿದೆ. 67.90ಕೋಟಿ ಹೊರ ಬಾಕಿ ಸಾಲವಿದ್ದು, ಶೇ.91.54ಸಾಲ ವಸೂಲಾತಿ ಮಾಡಲಾಗಿದೆ. ಸಹಕಾರಿ ಸಂಘಗಳ ಕಾಯಿದೆ ತಿದ್ದುಪಡಿ ಹಿನ್ನಲೆಯಲ್ಲಿ ಬ್ಯಾಂಕಿನ ಸಮಗ್ರ ಉಪವಿಧಿಯನ್ನು ತಿದ್ದುಪಡಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಹಿರಿಯ ಸದಸ್ಯರಾದ ವಿಶ್ವೇಶ್ವರ ಭಟ್ ಹಾಗೂ ಕೆ. ಎಸ್. ಕೃಷ್ಣ ಭಟ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿರ್ದೇಶಕ ಮನೋರಂಜನ್ ಕೆ. ಆರ್. ನಡವಳಿಯನ್ನು ಓದಿದರು.
ಉಪಾಧ್ಯಕ್ಷ ಮೋಹನ್ ಕೆ.ಎಸ್., ನಿರ್ದೇಶಕರಾದ ಎಂ. ಹರೀಶ್ ನಾಯಕ್, ವಿಶ್ವನಾಥ ಎಂ., ಕೃಷ್ಣ ಕೆ., ಉದಯಕುಮಾರ್ ಎ., ಬಾಲಕೃಷ್ಣ ಪಿ.ಎಸ್., ದಿವಾಕರ ವಿ., ದಯಾನಂದ ಆಳ್ವ ಕೆ., ಸುಂದರ ಡಿ., ಗೋವರ್ಧನ ಕುಮಾರ್ ಐ., ಶುಭಲಕ್ಷ್ಮಿ, ಜಯಂತಿ ಎಚ್. ರಾವ್ ಉಪಸ್ಥಿತರಿದ್ದರು.
ಬಿ. ಸಿ. ರೋಡ್ ಶಾಖಾಧಿಕಾರಿ ಕೆ. ಶ್ರೀನಿಧಿ ವಿ. ಕುಡ್ವ ಪ್ರಾರ್ಥಿಸಿದರು. ವಿಟ್ಲ ಕಛೇರಿಯ ಮಹೇಶ್ ಕುಮಾರ್ ಎಸ್. ಕಾರ್ಯಕ್ರಮ ನಿರೂಪಿಸಿದರು.