April 21, 2025

ಡೇರೆಯಿಂದ ಎಸಿ ಹಾಲ್ ನತ್ತ ರೇಂಬೋ ಸರ್ಕಸ್: ಮಂಗಳೂರು ಟಿಎಂಎ ಪೈ ಆಡಿಟೋರಿಯಂನಲ್ಲಿ ಪ್ರದರ್ಶನ

0

ಕಳೆದ 32 ವರ್ಷಗಳ ಇತಿಹಾಸ ಹೊಂದಿರುವ ಅಂತರಾಷ್ಟ್ರೀಯ ರೇಂಬೋ ಸರ್ಕಸ್ ಡೇರೆಯೊಳಗಿನ (ಟೆಂಟ್) ಪ್ರದರ್ಶನದಿಂದ ಹೊರ ಬಂದು ವೈವಿದ್ಯಮಯ ಹೊಸತನದ ಆಟದೊಂದಿಗೆ ಎಸಿ ಹಾಲ್ ಗೆ ಸ್ಥಳಾಂತರಗೊಂಡಿದೆ. ಮಂಗಳೂರಿನ ಟಿಎಂಎ ಪೈ ಆಡಿಟೋರಿಯಂ ನಲ್ಲಿ ಸೆಪ್ಟಂಬರ್ 21 ರಿಂದ ಪ್ರಾರಂಭವಾಗಿರುವ ಸರ್ಕಸ್ ಸೆಪ್ಟಂಬರ್ 24ರ ತನಕ 4 ದಿನಗಳ ಕಾಲ ಪ್ರದರ್ಶನವಾಗಲಿದೆ.

2 ತಾಸುಗಳ ಪ್ರದರ್ಶನದಲ್ಲಿ ಬಬಲ್ ಶೋ, ಸ್ಕೇಟಿಂಗ್, ಹ್ಯೂಮನ್ ಸ್ಲಿಂಗಿಂಗ್, ಸ್ವೋರ್ಡ್ ಆಕ್ಟ್, ಕ್ಯೂಬ್ ಜಗ್ಲಿಂಗ್, ರೋಲಾ ಬೊಲ್ಲಾ, ಹುಲಾ ಹೂಪ್ ಮತ್ತು ಏರಿಯಲ್ ರೋಪ್‌ನಂತಹ ಕೆಲವು ದಿಗ್ಭ್ರಮೆಗೊಳಿಸುವ ಚಮತ್ಕಾರಗಳು ಪ್ರಮುಖ ಆಕರ್ಷಣೆಯಾಗಿದೆ. ನಾವು ಈ ಹಿಂದೆ ಕಂಡಂತಹ ಸರ್ಕಸ್ ಇಂದಿಲ್ವ. ಡೇರೆ ಇಲ್ಲ. ಅದರೊಳಗಿನ ಧೂಳು, ಸೆಖೆ, ಆನೆ ಲದ್ದಿಯ ವಾಸನೆ ಯಾವುದೂ ಇಲ್ಲ. ಕಾನೂನು ಪ್ರಕಾರ ಪ್ರಾಣಿ, ಪಕ್ಷಿಗಳನ್ನೂ ಉಪಯೋಗಿಸುವಂತಿಲ್ಲ. ಮರಣ ಬಾವಿಯಿಲ್ಲ. ಬೈಕಿನ ಕರ್ಕಶ.ಶಬ್ದವಿಲ್ಲ. ಈಗ ಎಲ್ಲವೂ ಮಾನವ ನಿರ್ಮಿತ ಚಮತ್ಕಾರ. ಹೊಸತನ, ವೈಶಿಷ್ಟ್ಯ. 40 ಕಲಾವಿದರ ತಂಡ ನಿರಂತರ ರಂಜಿಸುತ್ತಾರೆ. ಮಕ್ಕಳಂತೂ ಸಕತ್ ಎಂಜಾಯ್ ಮಾಡ್ತಾರೆ.

ಒಂದು ಕಾಲದಲ್ಲಿ ಒಂದೊಂದು ಪಟ್ಟಣಗಳಿಗೆ ತೆರಳಿ ತಿಂಗಳುಗಟ್ಟಲೆ ಡೇರೆ ಕಟ್ಟಿ ಪ್ರದರ್ಶನ ನೀಡುತ್ತಿದ್ದ ರೇಂಬೋ ಸರ್ಕಸ್ ಕೋವಿಡ್ ನಂತರ ಇಂಟರ್ನೆಟ್ ಮೂಲಕ ಪ್ರದರ್ಶನ ಬಿತ್ತರಿಸಿ ಡಿಜಿಟಲ್ ಮಾದ್ಯಮದ ಮೊರೆ ಹೋಗಿತ್ತು. ಪ್ರಸ್ತುತ ಎಸಿ ಹಾಲ್ ನತ್ತ ಲೈವ್ ಪ್ರದರ್ಶನ ನೀಡಲು ಮುಖ ಮಾಡಿದೆ. ಮಂಗಳೂರಿನ ಟಿಎಂಎ ಪೈ ಹಾಲ್ ಕೂಡಾ ಡೇರೆಯ ವಿನ್ಯಾಸವನ್ನು ಹೊಂದಿದ್ದು ಕಾಕತಾಳೀಯ ಎನ್ನಬಹುದು. ಮಂಗಳೂರಲ್ಲಿ ಸೆಪ್ಟಂಬರ್ 21 ರಿಂದ 24 ರ ತನಕ ರೇಂಬೋ ಸರ್ಕಸ್ ನಡೆಯಲಿದೆ. ತುಂಬಾ ಮನರಂಜಿಸುವ ಆಸಕ್ತದಾಯಕ ಆಟಗಳೊಂದಿಗೆ ಮೈಮನ ಪುಳಕಿತಗೊಳಿಸುತ್ತಾರೆ. ಮೊದಲ ದಿನ 2 ಶೋ ಇತ್ತು. ಸೆಪ್ಟಂಬರ್ 22 ರಂದು ಮಧ್ಯಾಹ್ನ 1, ಸಂಜೆ 4 ಮತ್ತು 7ಕ್ಕೆ ಪ್ರದರ್ಶನವಿದೆ. 23 ಮತ್ತು 24 ರಂದು ತಲಾ 4 ಶೋ. 11, 1, 4, 7 ಈ ಸಮಯಗಳಲ್ಲಿ ಪ್ರದರ್ಶನವಿದೆ. ಟಿಕೇಟಿಗೆ 350, 400, 500 ಮತ್ತು 750 ಹೀಗೇ 4 ವಿಭಾಗಗಳಿವೆ. ಬುಕ್ ಮೈ ಶೋ ಆಪ್ ಹಾಗೂ ಹಾಲ್ ನ ಬಾಕ್ಸ್ ಆಫೀಸಲ್ಲಿ ಟಿಕೆಟ್ ಲಭ್ಯವಿದೆ. ಟಿಕೆಟಿನ ಒಂದು ಮೊತ್ತ ಬಡ/ಅಶಕ್ತ ಕಲಾವಿದರ ವಿದ್ಯಾಭ್ಯಾಸ, ಆರೋಗ್ಯ, ಮೂಲಭೂತ ಸೌಕರ್ಯಕ್ಕೆ ವಿನಿಯೋಗಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
-ರಶೀದ್ ವಿಟ್ಲ.

 

 

Leave a Reply

Your email address will not be published. Required fields are marked *

error: Content is protected !!