ಚೈತ್ರಾ ಕುಂದಾಪುರ ಪ್ರಕರಣಕ್ಕೂ ವಿಶ್ವ ಹಿಂದೂ ಪರಿಷತ್ ಗೂ ಸಂಬಂಧ ಇಲ್ಲ: ಶರಣ್ ಪಂಪ್ವೆಲ್
ಮಂಗಳೂರು: ಚೈತ್ರಾ ಕುಂದಾಪುರ ಪ್ರಕರಣಕ್ಕೂ ನಮ್ಮ ಸಂಘಟನೆಗೂ ಸಂಬಂಧ ಇಲ್ಲ. ನಮ್ಮ ಕಾರ್ಯಕ್ರಮಕ್ಕೆ ಭಾಷಣಕಾರರಾಗಿ ಕರೆಯುತ್ತಿದ್ದೆವು. ಯಾಕೆಂದರೆ ಚೆನ್ನಾಗಿ ಭಾಷಣ ಮಾಡ್ತಾಳೆ. ಸಾಕಷ್ಟು ಕಲಿತಿದ್ದಾಳೆ. ಸಾಕಷ್ಟು ತಿಳುವಳಿಕೆ ಇದೆ. ಹೀಗಾಗಿ ಬೇರೆ ಬೇರೇ ಕಾರ್ಯಕ್ರಮಕ್ಕೆ ನಾವು ಕರೆಯುತ್ತಿದ್ದೆವು ಎಂದು ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಪ್ರಕರಣದ ಬಗ್ಗೆ ದೂರು ನೀಡಲಾಗಿದೆ ಎಂದು ನನ್ನ ಗಮನಕ್ಕೆ ತಂದಿದ್ದೇ ಗುರುಪುರ ಸ್ವಾಮೀಜಿ ಅವರು. ಅದಕ್ಕೆ ನಾನು ಅವರಿಗೆ ಧೈರ್ಯ ತುಂಬಿದ್ದೆ. ನಿಮ್ಮ ಪಾತ್ರ ಇಲ್ಲ ಎಂದ ಮೇಲೆ ನೀವು ಏಕೆ ಆತಂಕ ವ್ಯಕ್ತಪಡಿಸುತ್ತೀರಿ. ತನಿಖೆ ಆಗ್ತಾ ಇದೆ. ತನಿಖೆ ಆಗಲಿ ಎಂದು ಹೇಳಿದ್ದೇನೆ ಎಂದರು.
ಈಗ ಸಿಸಿಬಿಯವರು ತನಿಖೆ ಮಾಡುತ್ತಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇ ಬೇಕು. ನಮ್ಮ ಸಂಘಟನೆ ಇಂಥವರಿಗೆ ಸಹಕಾರ ಯಾವತ್ತೂ ನೀಡುವುದಿಲ್ಲ. ಮುಂದೆಯೂ ನೀಡುವುದಿಲ್ಲ ಎಂದರು.





