ತಂದೆ-ತಾಯಿ, ಇಬ್ಬರು ಮಕ್ಕಳು, ಮೂರು ನಾಯಿಗಳಳನ್ನು ಗುಂಡಿಕ್ಕಿ ಹತ್ಯೆ

ವಾಷಿಂಗ್ಟನ್: ಚಿಕಾಗೋ ಉಪನಗರದ ಮನೆಯೊಂದರಲ್ಲಿ ದಂಪತಿ, ಅವರ ಇಬ್ಬರು ಪುಟ್ಟ ಮಕ್ಕಳು ಹಾಗೂ ಮನೆಯ ಮೂರು ಶ್ವಾನಗಳನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.
ಮೃತರು ಆಲ್ಬರ್ಟೊ ರೊಲೊನ್, ಜೊರೈಡಾ ಬಾರ್ಟೊಲೊಮಿ ದಂಪತಿ ಮತ್ತು ಅವರ ಮಕ್ಕಳಾದ ಅಡ್ರಿಯಲ್ (10), ಡಿಯಾಗೋ (7), ಅವರ ಮೂರು ನಾಯಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.