February 3, 2026

ಸುಳ್ಯ: ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ: ತಪ್ಪಿದ್ದ ಭಾರೀ ಅನಾಹುತ

0
IMG-20230917-WA0006.jpg



ಸುಳ್ಯ: ನಿಂತಿದ್ದ ಕ್ವಾಲಿಸ್ ಕಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ಕುಕ್ಕೆ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಸರ್ಪಸಂಸ್ಕಾರ ಯಾಗ ಶಾಲೆ ಬಳಿ ನಡೆದಿದೆ.

ಬೆಂಗಳೂರಿನಿಂದ ಸರ್ಪಸಂಸ್ಕಾರ ನಡೆಸಲು ಆಗಮಿಸಿದ್ದ ಕುಟುಂಬವೊಂದು ಯಾಗಶಾಲೆಯ ಮುಂದೆ ಕಾರು ನಿಲ್ಲಿಸಿತ್ತು.ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅದನ್ನು ನಂದಿಸಿ 30ಕ್ಕೂ ಹೆಚ್ಚು ವಾಹನಗಳು ಪಕ್ಕದಲ್ಲೇ ನಿಂತಿದ್ದರಿಂದ ಭಾರೀ ಅನಾಹುತ ತಪ್ಪಿಸಿದ್ದಾರೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!