ಮುಲ್ಕಿ: ಬೈಕ್‌ಗೆ ಕಾರು ಢಿಕ್ಕಿ, ಹಿಂಬದಿ ಸವಾರೆ ಮೃತ್ಯು, ಸವಾರ ಗಂಭೀರ
ಮುಲ್ಕಿ: ಬೈಕ್‌ಗೆ ಕಾರು ಢಿಕ್ಕಿಯಾಗಿ ಸಹ ಸವಾರೆ ಮೃತಪಟ್ಟು ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ವಿಜಯ ಸನ್ನಿಧಿ ಜಂಕ್ಷನ್ ಬಳಿ ಶುಕ್ರವಾರ ನಡೆದಿದೆ.
ಮೃತರನ್ನು ಕೇರಳದ ಕಾಸರಗೋಡಿನ ಪ್ರೀತಿಕಾ ಶೆಟ್ಟಿ (21) ಎಂದು ಗುರುತಿಸಲಾಗಿದ್ದು, ಗಾಯಾಳು ಬೈಕ್ ಸವಾರನನ್ನು ಬಂಟ್ವಾಳ ತಾಲ್ಲೂಕು ಅರಂತೋಡಿ ಬಾಳೆಪುಣಿ ನಿವಾಸಿ ಮನ್ವಿತ್ ರಾಜ್ ಶೆಟ್ಟಿ (21)ಎಂದು ಗುರುತಿಸಲಾಗಿದೆ.
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್ ಗೆ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ವಿಜಯ ಸನ್ನಿಧಿ ಜಂಕ್ಷನ್ ಬಳಿ ಕಿನ್ನಿಗೋಳಿ ಕಡೆಯಿಂದ ಮುಲ್ಕಿ ಕಡೆಗೆ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ.




