ಪೂಜೆಗೆ ತೆರಳಿದ್ದ ವೈದ್ಯ ಹೇಮಾವತಿ ನದಿಯಲ್ಲಿ ಮುಳುಗಿ ಮೃತ್ಯು
ಹಾಸನ: ಪೂಜೆಗೆ ತೆರಳಿದ್ದ ವೈದ್ಯರೊಬ್ಬರು ಹೇಮಾವತಿ ನದಿಯ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಖೋನಾಪುರದಲ್ಲಿ ನಡೆದಿದೆ.
ಹಲವು ವರ್ಷಗಳಿಂದಲೂ ಚಂದ್ರಶೇಖರ್ ಹೇಮಾವತಿ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಿದ್ದರು. ಅದರಂತೆ ಚಂದ್ರಶೇಖರ್ ಶುಕ್ರವಾರ ಸಹ ಪೂಜೆಗೂ ಮುನ್ನ ನದಿಗೆ ಇಳಿದಿದ್ದರು.
ಹೇಮಾವತಿ ನದಿ ನೀರು ಸಂಪೂರ್ಣ ಕಡಿಮೆಯಾಗಿದ್ದು, ಆಳ ಅರಿಯದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.




